ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುಂಡುಗುಡ್ಡೆ, ಮುದ್ರಾಡಿ ಇಲ್ಲಿ ಯಕ್ಷಗಾನ ಹಾಗೂ ಸ್ಪೋಕನ್ ಇಂಗ್ಲೀಷ್ ತರಗತಿಗಳ ಉದ್ಘಾಟನೆ, ವಿದ್ಯಾರ್ಥಿಗಳಿಗೆ ವಿವಿಧ ಕೊಡುಗೆಗಳ ಹಸ್ತಾಂತರ, ಚಿಣ್ಣರ ನಿಧಿ ಯೋಜನೆಗೊಂದು ಚಾಲನೆ ಇತ್ಯಾದಿ ಕಾರ್ಯಕ್ರಮಗಳು ಮುದ್ರಾಡಿ ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ವಸಂತಿ ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಯಕ್ಷಗಾನ ಗುರುಗಳಾದ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ, ಸ್ಪೋಕನ್ ಇಂಗ್ಲೀಷ್ ಶಿಕ್ಷಕಿಯಾದ ಶ್ರೀಮತಿ ಚಿತ್ರ, ಎಸ್‌ಡಿಎಂಸಿ ಗೌರವಾಧ್ಯಕ್ಷರಾದ ಮಧುಸೂದನ್ ಭಟ್, ಎಸ್‌ಡಿಎಂಸಿ ಅಧ್ಯಕ್ಷರಾದ ಶಂಕರ್ ಕುಲಾಲ್, ಉಪಾಧ್ಯಕ್ಷರಾದ ಶ್ರೀಮತಿ ಅಖಿಲಾ ಶೆಟ್ಟಿ, ಮುದ್ರಾಡಿ ಗ್ರಾ. ಪಂ. ಸದಸ್ಯರಾದ ಮಂಜುನಾಥ ಹೆಗ್ಡೆ, ಗಣಪತಿ ಎಂ., ಬೈದಶ್ರೀ ಫ್ರೆಂಡ್ಸ್ ನ ಗೌರವಾಧ್ಯಕ್ಷರಾದ ಸುಧಾಕರ್ ಪೂಜಾರಿ, ಸದಸ್ಯರಾದ ಶೋಧನ್ ಶೆಟ್ಟಿ, ಎಸ್.ಎನ್.ಸಿ. ಕಂಪನಿಯ ಸುಬ್ರಹ್ಮಣ್ಯ ಹಾಗೂ ಧನಂಜಯ್, ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸೂರಜ್ ಶೆಟ್ಟಿ, ದಾನಿಗಳಾದ ಸುರೇಶ್ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್‌ಎನ್‌ಸಿ ವತಿಯಿಂದ ಕೊಡಲ್ಪಟ್ಟ ನೋಟ್ ಪುಸ್ತಕ, ಸ್ಟೇಷನರಿ ವಸ್ತುಗಳು ಹಾಗೂ ನಲಿಕಲಿ ತರಗತಿಗೆ ಕುರ್ಚಿಗಳು, ಬೈದಶ್ರೀ ಫ್ರೆಂಡ್ಸ್ ಸಂಘದ ವತಿಯಿಂದ ಕೊಡಲ್ಪಟ್ಟ ಕೊಡೆಯನ್ನು ಹಾಗೂ ದಾನಿಗಳಿಂದ ಕೊಡಲ್ಪಟ್ಟ ಶಾಲಾ ಬ್ಯಾಗ್ ಗಳನ್ನು ಮಕ್ಕಳಿಗೆ ವಿತರಿಸಲಾಯಿತು.
ಮುಖ್ಯ ಶಿಕ್ಷಕಿಯಾದ ಶ್ರೀಮತಿ ಚಿತ್ರ ಪ್ರಾಸ್ತಾವಿಕ ನುಡಿಯೊಂದಿಗೆ ಗಣ್ಯರನ್ನು ಸ್ವಾಗತಿಸಿದರು. ಶಿಕ್ಷಕಿಯಾದ ಶ್ರೀಮತಿ ಬಾಬಿ ವಂದಿಸಿದರು. ಶಿಕ್ಷಕಿಯಾದ ಶ್ರೀಮತಿ ಪ್ರಮಿತ ನಿರೂಪಿಸಿದರು.