Blog

ಅಹ್ಮದಾಬಾದ್ ವಿಮಾನ ದುರಂತ – ಉದಯ ಶೆಟ್ಟಿ ಮುನಿಯಾಲು ಸಂತಾಪ

ಅಹಮದಾಬಾದ್ ವಿಮಾನ ದುರಂತಕ್ಕೆ ಉದಯ ಶೆಟ್ಟಿ ಮುನಿಯಾಲು ಬೇಸರ

ಗುಜರಾತ್ ರಾಜ್ಯದ ಅಹ್ಮದಾಬಾದ್ ನಗರದಿಂದ  ಲಂಡನಿಗೆ 242  ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ  ವಿಮಾನವು  ಟೇಕ್ ಆಪ್ ಆದ ಕೆಲವೇ ಕ್ಷಣದಲ್ಲಿ  ಪತನಗೊಂಡು 241 ಜನರು ಅಸುನೀಗಿರುವುದು  ಅತ್ಯಂತ ನೋವಿನ ವಿಚಾರ,  ವಿಮಾನ ಪತನದ ಸಂದರ್ಭದಲ್ಲಿ ಮೆಘಾನಿ ನಗರದ ವಿದ್ಯಾರ್ಥಿ ನಿಲಯದ ಮೇಲೆ  ಬಡಿದು ಅಲ್ಲಿನ ವಿದ್ಯಾರ್ಥಿಗಳೂ ಸೇರಿದಂತೆ ಹಲವಾರು ಜನರು ಮೃತರಾಗಿದ್ದಾರೆ.   ದುರಂತದಲ್ಲಿ ಸಾವೀಗೀಡಾದವರ ಆತ್ಮಕ್ಕೆ ಶಾಂತಿ ದೊರಕಲಿ, ಮೃತರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ತಿಳಿಸಿದ್ದಾರೆ.

ವಿಮಾನ‌ ನಿಲ್ದಾಣದಿಂದ ಹೊರಟು ಕೆಲವೇ ನಿಮಿಷಗಳಲ್ಲಿ ಪತನಗೊಂಡಿರುವುದು ಹಲವಾರು ಪ್ರಶ್ನೆಗಳು ಉದ್ಭವವಾಗಲು ಕಾರಣವಾಗಿದೆ,ಈ ಕುರಿತು ಸಮಗ್ರ ತನಿಖೆಯಾಗಬೇಕು, ಹಾಗು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರವು ಸಮರ್ಪಕ ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರವು ಗರಿಷ್ಠ ಪ್ರಮಾಣದ ಪರಿಹಾರವನ್ನು ನೀಡಬೇಕು ಎಂದು ಉದಯ ಶೆಟ್ಟಿ ಮುನಿಯಾಲು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಸಾಧು ಪೂಜಾರಿ ನಿಧನ

Madhyama Bimba

ಮುನಿಯಾಲು ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವ ರೂಪ ದರ್ಶನ

Madhyama Bimba

ಬಾಲಕೃಷ್ಣ ಪೂಜಾರಿಯ ಕೊಲೆ ಆರೋಪಿಯನ್ನು ರಕ್ಷಿಸದಂತೆ ಕುಟುಂಬಸ್ಥರಿಂದ ಒತ್ತಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More