ಮೂಡುಬಿದಿರೆ

ಶಿರ್ತಾಡಿ ರಸ್ತೆಯಲ್ಲಿ ಕಣಿವೆ- ವಾಹನ ಸವಾರರಿಗೆ ಅಪಾಯ ಭೀತಿ- ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ

ಶಿರ್ತಾಡಿ ಮೂಡುಬಿದಿರೆ ರಸ್ತೆಯಲ್ಲಿ ಶಿರ್ತಾಡಿ ಸೇತುವೆ ಸಮೀಪ ಕಜೆ ರಸ್ತೆಯನ್ನು ಸಂಪರ್ಕಿಸುವ ಭಾಗದಲ್ಲಿ ಮುಖ್ಯರಸ್ತೆಯಲ್ಲಿ ಕಂಡುಬರುವ ಕಣಿವೆಯೊಂದು ವಾಹನ ಸಂಚಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.


ಶಿರ್ತಾಡಿ ಕಡೆಯಿಂದ ಬರುವ ವಾಹನಗಳು ಈ ಭಾಗದ ಇಳಿಜಾರು ರಸ್ತೆಯಲ್ಲಿ ವೇಗ ಪಡೆದುಕೊಂಡಲ್ಲಿ ಗುಂಡಿಗೆ ಬಿದ್ದ ಅನುಭವ ವಾಹನ ಸಂಚಾರರಿಗೆ ಆಗುತಿದೆ. ಮುಖ್ಯ ಡಾಮಾರು ರಸ್ತೆಯನ್ನು ಅಡ್ಡಲಾಗಿ ಅಗೆದು ಮತ್ತೇ ಮಣ್ಣು ತುಂಬಿ ದುರಸ್ತಿ ನಡೆಸಿ ಡಾಮಾರು ಹಾಕಿರುವುದರಿಂದ ಈ ಭಾಗವು ಕಣಿವೆಯಾಗಿ ಪರಿಣಮಿಸಿದೆ. ಸರಿಯಾದ ತಾಂತ್ರಿಕ ಚಿಂತನೆಯಿಲ್ಲದೆ ರಸ್ತೆಯನ್ನು ಸುರಸ್ತಿ ಪಡಿಸಿರುವ ಪರಿಣಾಮ ವಾಹನ ಸವಾರರು ಈ ಅಪಾಯವನ್ನು ಕಾಣುವಂತಾಗಿದೆ.

ಮಕ್ಕಳು ಮಹಿಳೆಯರು ವಾಹನದಲ್ಲಿ ಸಂಚರಿಸುವಾಗ ಗುಂಡಿಗೆ ಬಿದ್ದ ಅನುಭವವಾಗಿ ದೇಹಕ್ಕೆ ಸಂಚಕಾರ ತಂದೊಡ್ಡುವಲ್ಲಿ ಈ ಅನಾಪೇಕ್ಷಿತ ರಸ್ತೆ ದುರಸ್ತಿ ಕಾರಣವಾಗುತಿದೆ. ವಾಹನಗಳು ಕೂಡ ಸಣ್ಣಪ್ರಮಾಣದಲ್ಲಿ ಅಘಾತವನ್ನು ಪಡೆದುಕೊಂಡು ವಾಹನ ಮಾಲಕರಿಗೆ ದಿಗ್ಭ್ರಮೆ ಮೂಡಿಸುತ್ತಿದೆ. ದಿನನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ವಾಹನ ಸವಾರರಿಗೆ ಆರೋಗ್ಯ ಸಮಸ್ಯೆ ತಂದೊಡ್ಡಲು ಪ್ರಮುಖ ಪಾತ್ರ ವಹಿಸುತ್ತಿದೆ. ಇದೇ ರೀತಿ ಕಣಿವೆ ಸಮಗೊಳಿಸದೇ ಮುಂದುವರಿದಲ್ಲಿ ಸವಾರರ ಬೆನ್ನು ಮೂಳೆ, ಸೊಂಟ ಕುಸಿಯುವ ಭೀತಿ ಇದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

 

Related posts

ಎನ್‌ಎಸ್‌ಎಸ್‌ನಿಂದ ಸಂವಿಧಾನದ ಸಮಾನತೆ ಮತ್ತು ಸಹಬಾಳ್ವೆಯ ಪಾಠ: ಎಕ್ಕಾರು

Madhyama Bimba

ಇರುವೈಲು ದೇವಸ್ಥಾನದ ಸಮಿತಿಗೆ ಆಯ್ಕೆ

Madhyama Bimba

ಮೂಡುಬಿದಿರೆ: ಸೇವಕ ಕಚೇರಿಯಲ್ಲಿ ಜನಸ್ಪಂದನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More