ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಕಲಾಯಿ ಮನೆ ಸುಬ್ಬಯ್ಯ ಶೆಟ್ಟಿ ಎಂಬವರು ನಿಧನರಾಗಿದ್ದು, ಇವರ ಸುಮಾರು ೧.೫ಲಕ್ಷ ರೂ. ಮೌಲ್ಯದ ಚಿನ್ನದ ಉಂಗುರಗಳು ಕಳೆದು ಹೋಗಿದ್ದವು. ಶಿರ್ಲಾಲು ಗ್ರಾಮ ಪಂಚಾಯತ್‌ನ ಕಸ ವಿಲೇವಾರಿ ಸಿಬ್ಬಂದಿಗಳಾದ ಜೀವಂಧರ್ ಮತ್ತು ಭೂಮಿಕಾ ಇವರಿಗೆ ಕಸ ವಿಲೇವಾರಿ ಸಂದರ್ಭದಲ್ಲಿ ಈ ಉಂಗುರಗಳು ಸಿಕ್ಕಿರುತ್ತದೆ. ಇವರು ಗ್ರಾಮ ಪಂಚಾಯತ್ ಮುಖಾಂತರ ಉಂಗುರಗಳನ್ನು ಮನೆಯವರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.




