ಕಾರ್ಕಳ: ಕಾರ್ಕಳದಲ್ಲಿ ಸುಮಾರು 32 ವರ್ಷಗಳಿಂದ ಉತ್ತಮ ಗುಣಮಟ್ಟದ ಉತ್ಪನ್ನ ಮತ್ತು ಸೇವೆಯೊಂದಿಗೆ ಗ್ರಾಹಕರ ಪ್ರೀತಿ ವಿಶ್ವಾಸವನ್ನು ಗಳಿಸಿರುವ ಕಾರ್ಕಳದ ಕಾಳಭೈರವ ಫರ್ನಿಚರ್‍ಸ್ ಆಂಡ್ ಎಲೆಕ್ಟ್ರೋನಿಕ್ಸ್ ಇದರ 3ನೇ ಶಾಖೆ ಕಾಳಭೈರವ ವೇರ್ ಹೌಸ್ ಆನೆಕೆರೆ ಶ್ರೀಕೃಷ್ಣ ಭಜನಾ ಮಂದಿರದ ಬಳಿ, ಮಧುರಾ ಫ್ಯಾಮಿಲಿ ರೆಸ್ಟೋರೆಂಟ್ ಎದುರು ಇತ್ತೀಚೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶುಭಾರಂಭಗೊಂಡಿತು.

ನೂತನ ಸಂಸ್ಥೆಯ ಉದ್ಘಾಟನೆಯನ್ನು ಕಾರ್ಕಳ ಟೈಗರ್‍ಸ್‌ನ ಸಂಸ್ಥಾಪಕರಾದ ಬೋಳ ಪ್ರಶಾಂತ್ ಕಾಮತ್ ಉದ್ಘಾಟಿಸಿ ನಂತರ ಮಾತನಾಡಿದ ಅವರು ಗೃಹೋಪಯೋಗಿಗೆ ಈ ಸಂಸ್ಥೆ ಮನೆಮಾತಾಗಿದೆ. ಸುಮಾರು 8ಸಾವಿರ ಚದರಡಿಯ ಹಾಗೂ ವಿಶಾಲವಾದ ಪಾಕಿಂಗ್ ವ್ಯವಸ್ಥೆಯನ್ನು ಹೊಂದಿರುವ ಈ ಮಳಿಗೆ ತಾಲೂಕಿನಲ್ಲಿಯೇ ದೊಡ್ಡ ಮಳಿಗೆಯಾಗಿದೆ ಎಂದು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಕಳ ಬೈಲಡ್ಕ ಬಾಲಾಜಿ ಶಿಬಿರದ ಗುರುಸ್ವಾಮಿಗಳಾದ ಬಾಲಕೃಷ್ಣ ಹೆಗ್ಡೆ ಆಶೀರ್ವಚನ ನೀಡಿ ಸಂಸ್ಥೆಗೆ ಶುಭ ಕೋರಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಸತೀಶ್ ಪೈ, ಬಿಲ್ಡಿಂಗ್ ಮಾಲಕರಾದ ಅರುಣ್ ಜೈನ್ ಬಜಗೋಳಿ, ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷೆ ಸುಮಾ ಕೇಶವ್, ಈ ವಾರ್ಡಿನ ಸದಸ್ಯೆ ಮೀನಾಕ್ಷಿ ಹಾಗೂ ಸಂಸ್ಥೆಯ ಸಂಸ್ಥಾಪಕರಾದ ಪ್ರಕಾಶ್ ಹೆಗ್ಡೆ ಹಾಗೂ ಮಾಲಕರಾದ ದಯಾನಂದ ಹೆಗ್ಡೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗುರುಸ್ವಾಮಿಗಳಾದ ಬಾಲಕೃಷ್ಣ ಹೆಗ್ಡೆಯವರಿಗೆ ಸನ್ಮಾನಿಸಲಾಯಿತು. ಹಾಗೂ ಪಿಹೆಚ್‌ಡಿ ಪದವಿ ಪಡೆದು ಇದೀಗ ನಿಟ್ಟೆ ಪದವಿ ಕಾಲೇಜಿನಲ್ಲಿ ಎಂಬಿಎ ಪ್ರೊಫೆಸರ್‌ಆಗಿ ಸೇವೆ ಸಲ್ಲಿಸುತ್ತಿರುವ ಡಾ. ಧನ್ಯ ಡಿ. ಹೆಗ್ಡೆಯವರನ್ನು (ಮಾಲಕರಾದ ಕೆ. ದಯಾನಂದ ಹೆಗ್ಡೆಯವರ ಪತ್ನಿ) ಕಾರ್ಕಳ ಮಹಿಳಾ ಮೋರ್ಚಾದ ವತಿಯಿಂದ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ಹಾಗೂ ಇನ್ನಿತರ ಗಣ್ಯರು ಆಗಮಿಸಿ ಸಂಸ್ಥೆಗೆ ಶುಭ ಕೋರಿದರು.
ಸಂಸ್ಥೆಯ ಮಾಲಕರು ಆಗಮಿಸಿದ ಅತಿಥಿಗಣ್ಯರನ್ನು ಹಾಗೂ ಗ್ರಾಹಕರನ್ನು ಸ್ವಾಗತಿಸಿ ನೂತನ ಸಂಸ್ಥೆಗೆ ಎಲ್ಲರ ಸಹಕಾರವನ್ನು ಕೋರಿದರು.
ನಳಿನಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.

ಶುಭಾರಂಭದ ಪ್ರಯುಕ್ತ ಶೇ. 40 ರಿಯಾಯಿತಿ ಹಾಗೂ ಉಚಿತ ಉಡುಗೊರೆಗಳು ಹಾಗೂ ಉಚಿತ ಸಾಗಾಟದ ವ್ಯವಸ್ಥೆಯನ್ನು ಗ್ರಾಹಕರಿಗೆ ನೀಡಲಾಗಿದೆ.
