ಕಾರ್ಕಳ: ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕಾರ್ಕಳ ಶಾಖೆಯ ನೂತನ ಸ್ವಂತ ಕಛೇರಿ ಉದ್ಘಾಟನಾ ಸಮಾರಂಭವು ಅ. 7ರ ರಂದು ಕಾರ್ಕಳ ಮಾರಿಗುಡಿ ದೇವಸ್ಥಾನದ ಹತ್ತಿರವಿರುವ ಪ್ರೈಮ್ ಸಿಟಿ ಸೆಂಟರ್‌ನಲ್ಲಿ ನಡೆಯಿತು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಕಾರ್ಕಳ ಪುರಸಭೆಯ ಅಧ್ಯಕ್ಷ ಯೋಗಿಶ್ ದೇವಾಡಿಗ ಉದ್ಘಾಟಿಸಿ ಮಾತನಾಡಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ತಮ್ಮ ಸಮಾಜದ ಬಂಧುಗಳಿಗೆ ಆರ್ಥಿಕ ನೆರವು ನೀಡುವುದರ ಮೂಲಕ ಅಭಿವೃದ್ಧಿಗೆ ಚೈತನ್ಯ ನೀಡಿದೆ. ಕೋರೊನಾದ ಅಂದಿನ ಸಂಕಷ್ಟ ಕಾಲದಲ್ಲೂ ಜನರಿಗೆ ತನ್ನಿಂದಾದ ಸೇವೆ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು.

ಸಹಾಕಾರಿ ಸಂಘದ ಅಧ್ಯಕ್ಷರಾದ ಪ್ರೊ. ನವೀನ್‌ಚಂದ್ರ ಭಂಡಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಲಾಭ ಗಳಿಸುವುದು ಕೇವಲ ಸಹಕಾರಿ ಸಂಘಗಳ ಉದ್ದೇಶವಾಗಿರಬಾರದು, ಲಾಭಂಶದಲ್ಲಿ ಸದಸ್ಯರಿಗೆ ಡೆವಿಡೆಂಡ್ ನೀಡುವುದು ಸಾಧನೆಯಲ್ಲ ಸಹಕಾರಿ ಸಂಘದ ಸದಸ್ಯರು ಅರ್ಥಿಕ ಅಭಿವೃದ್ಧಿ ಹೊಂದುವುದೆ ನಿಜವಾದ ಸಾಧನೆ ಎಂದರು. ಸುಮಾರು 18 ವರ್ಷಗಳ ಹಿಂದೆ ಸವಿತಾ ಸಮಾಜದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಅಭಿವೃದ್ಧಿಗಾಗಿ ಹುಟ್ಟು ಹಾಕಲಾಗಿದ್ದ ಸಂಘವು ಸಮಾಜ ಭಾಂದವರ ಸಹಕಾರದಿಂದ ಹೆಮ್ಮರವಾಗಿ ಬೆಳೆದಿದೆ ಎಂದರು,

ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ ಸವಿತಾ ಸಮಾಜವು ಚಿಕ್ಕ ಸಮುದಾಯವಾದರೂ ಆರ್ಥಿಕತೆಯಲ್ಲಿ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ಸಮಾಜ ಸೇವೆಗಾಗಿ ಒಂದಿಷ್ಟು ಮಂದಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಿವಂಗತ ಗೋಪಾಲ ಭಂಡಾರಿಯವರು ಈ ಸಮಾಜದಲ್ಲಿ ಶ್ರ್ರೇಷ್ಠ ವ್ಯಕ್ತಿಯಾಗಿ ಗುರುತಿಸಿಕೊಂಡವರು.ಅವರ ಮಾರ್ಗದರ್ಶನದಂತೆ ನಾವಿಂದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಸಂಘ ಸಂಸ್ಥೆಗಳಲ್ಲಿ ಟೀಕೆಗಳು ಸಹಜ ಅದಕ್ಕೆ ಕಿವಿಗೊಡದೆ ಸಮಾಜದ ಪರ ಚಿಂತನೆಯುಳ್ಳ ವ್ಯಕ್ತಿಗಳನ್ನು ಪ್ರೊತ್ಸಾಹಿಸಿದಾಗ ಸಮಾಜ ಅಭಿವೃದ್ಧಿಯತ್ತ ಸಾಗುತ್ತದೆ ಎಂದರು.

ಸಂಘದ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ, ಬೆಂಗಳೂರು ಇದರ ನಿರ್ದೇಶಕ ಮಂಜುನಾಥ ಎಸ್.ಕೆ. ಭದ್ರತಾ ಕೋಠಡಿಯನ್ನು ಉದ್ಘಾಟಿಸಿದರು. ಉಡುಪಿ ಹರ್ಷ ಭಾರತಿ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಹರೀಶ್ ಸುವರ್ಣ ಸೆಲೂನು ಮಳಿಗೆಯನ್ನು ಉದ್ಘಾಟಿಸಿದರು, ಸಂಘದ ಉಪಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಶೇಖರ್ ಭಂಡಾರಿ, ಪವರ್ ಪಾಯಿಂಟ್ ಬ್ಯಾಗ್ ಮಾಲಕ ಮಹಾವೀರ ಹೆಗ್ಡೆ, ದ. ಕ. ಮತ್ತು ಉಡುಪಿ ಜಿಲ್ಲೆಯ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ. ಎಸ್., ಉಡುಪಿ ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷರು ರಾಜು ಸಿ. ಭಂಡಾರಿ ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್ಕಳ ತಾಲೂಕು ಸವಿತಾ ಸಮಾಜ ಅಧ್ಯಕ್ಷರು ಹಾಗೂ ನಿರ್ದೇಶಕರಾದ ನಾಗೇಶ್ ಭಂಡಾರಿ, ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರಾಜು ಸಿ. ಭಂಡಾರಿ, ಕಾರ್ಕಳ ತಾಲೂಕು ಸವಿತಾ ಸಮಾಜದ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ನಿರ್ದೇಶಕರುಗಳಾದ ಸದಾಶಿವ ಬಂಗೇರ ಕುರ್ಕಾಲು, ವಿಶ್ವನಾಥ ಭಂಡಾರಿ ನಿಂಜೂರು, ಶೇಖರ ಸಾಲಿಯಾನ್ ಆದಿ ಉಡುಪಿ, ಸತೀಶ್ ಭಂಡಾರಿ ಕಾಪು, ಸುಮನ ಕೃಷ್ಣ ಭಂಡಾರಿ ಕಾರ್ಕಳ, ಶಿವಾನಂದ ಸಾಲ್ಯಾನ್ ಬೆಳ್ಮಣ್, ನವೀನ್ ಭಂಡಾರಿ ಬಸ್ರೂರು, ರಾಜು ಭಂಡಾರಿ ಕಿನ್ನಿಮೂಲ್ಕಿ, ಶಿವರಾಮ ಭಂಡಾರಿ ಹಂದಾಡಿ, ಪಿ. ಚಂದ್ರಶೇಖರ್ ಭಂಡಾರಿ ಹುಣ್ಸೆಮಕ್ಕಿ, ಗೋಪಾಲ್ ಮಲ್ಯ ಬೈಂದೂರು, ಶ್ರೀಮತಿ ಶ್ರೀಲತ ನರೇಂದ್ರ ಸಾಲ್ಯಾನ್, ಕಾಪು, ನಾಮನಿರ್ದೇಶಕರಾದ ಕೆ. ದಿನೆಶ್ ಭಂಡಾರಿ ಕೊಕ್ಕರ್ಣೆ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮಾಲತಿ ಅಶೋಕ್ ಭಂಡಾರಿ, ಕಾರ್ಕಳ ಶಾಖಾ ವ್ಯವಸ್ಥಾಪಕಿ ಶ್ರೀಮತಿ ಮಾಲಿನಿ ಪ್ರಸನ್ನ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಉಡುಪಿ ಜಿಲ್ಲಾ ಸವಿತಾ ಸಮಾಜದ ರಾಜ್ಯ ಪ್ರತಿನಿಧಿ ಬನ್ನಂಜೆ ಗೋವಿಂದ ಭಂಡಾರಿ ಪ್ರಾಸ್ತಾವನೆಗೈದರು. ಕಾರ್ಕಳ ಉಪಶಾಖೆಯ ನಿದೇಶಕರಾದ ಪ್ರಶಾಂತ್ ಸಾಲ್ಯಾನ್ ನಲ್ಲೂರು ಸ್ವಾಗತಿಸಿದರು. ಶಶಿಕಲಾ ಅಮರನಾಥ ಭಂಡಾರಿ ಪ್ರಾರ್ಥಿಸಿದರು. ಮಂಜುನಾಥ ಭಂಡಾರಿ ಪಡುಕೆರೆ, ನಿರೂಪಿಸಿದರು. ರೇಷ್ಮಾ ಸುದರ್ಶನ್ ಭಂಡಾರಿ ವಂದಿಸಿದರು.
