ಕಾರ್ಕಳ: ಮೂರ್ತೆದಾರರ ಸೇವಾ ಸಹಕಾರಿ ಸಂಘ(ನಿ.) ಕಲ್ಯಾ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಆವರಣದಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುಧಾಕರ್ ಎನ್.ಕೋಟ್ಯಾನ್ ಇವರು ವಹಿಸಿದ್ದರು.

ಹಿರಿಯ ನಿರ್ದೇಶಕರಾಗಿದ್ದು ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಸುಂದರ್ ಜೆ.ಅಂಚನ್ ನಿಟ್ಟೆ ಮತ್ತು ಜಯ ಪೂಜಾರಿ ಪಳ್ಳಿ ಹಾಗೂ ಸಂಘದ ಗ್ರಾಹಕರಾಗಿದ್ದು ಪಡಕೊಂಡ ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿಸಿದ ಅಶೋಕ್ ಎಸ್. ಪೂಜಾರಿ ಕಲ್ಯಾ, ಕೃಷ್ಣ ಆಚಾರ್ಯ ನಿಟ್ಟೆ, ಮತ್ತು ವಿಠ್ಠಲ್ ಶೆಟ್ಟಿ ನಿಟ್ಟೆ ಇವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಿಲಾಯಿತು.

ಸಭಾ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸದಾಶಿವ ಪೂಜಾರಿ ಕಾಂತಾವರ, ನಿರ್ದೇಶಕರಾದ ಕೃಷ್ಣ ಎಸ್.ಪೂಜಾರಿ ಕಲ್ಯಾ, ಕರುಣಾಕರ ಪೂಜಾರಿ ಕಲ್ಯಾ, ಸಂಜೀವ ಪೂಜಾರಿ ಕಲ್ಯಾ, ಸಂಜೀವ ಪೂಜಾರಿ ನಿಟ್ಟೆ, ಸುಂದರ್ ಜೆ.ಅಂಚನ್ ನಿಟ್ಟೆ, ಜಯ ಪೂಜಾರಿ ಪಳ್ಳಿ, ಕೆ.ಪ್ರಕಾಶ್ ಕೋಟ್ಯಾನ್ ಕೆಮ್ಮಣ್ಣು, ರವೀಂದ್ರ ಡಿ.ಪೂಜಾರಿ ನಿಟ್ಟೆ, ರಾಮಚಂದ್ರ ಪೂಜಾರಿ ನಿಟ್ಟೆ, ಶ್ರೀಮತಿ ಶಕುಂತಳ ಬಂಗೇರ ಸಿಂಧುಕೃಪಾ, ಪ್ರಶಾಂತ್ ಪೂಜಾರಿ ಕಲ್ಯಾ , ರಘುಪತಿ ಪೂಜಾರಿ ಕಲ್ಯಾ ಹಾಗೂ ಆಂತರಿಕ ಲೆಕ್ಕಪರಿಶೋಧಕರಾದ ವಸಂತ್ ಪೂಜಾರಿ ಮಾವಿನಕಟ್ಟೆ ಇವರು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿಯಾದ ನಿತಿನ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
