ಕೀರ್ತಿಶೇಷ ಬಲಿಪ ಭಾಗವತದೈಯರ ಪುಣ್ಯ ಸ್ಮೃತಿ ಹಾಗೂ ಎಕ್ಸಲೆಂಟ್ ವಿದ್ಯಾಸಂಸ್ಥೆ ಸಹಯೋಗದೊಂದಿಗೆ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನ. 2 ರಂದು ಅಪರಾಹ್ನ ಗಂಟೆ 2.30ಕ್ಕೆ ಬಲಿಪ ಭಾಗವತ ಪ್ರಶಸ್ತಿ, ಪ್ರದಾನ- 2025 ಕಾರ್ಯಕ್ರಮ ಏರ್ಪಡಿಸಲಾಗಿದೆ.
ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರು ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಹಿಮ್ಮೇಳವಾದಕ ಪೆರುವಾಯಿ ನಾರಾಯಣ ಭಟ್ ಅವರಿಗೆ ಬಲಿಪ ಭಾಗವತ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಅತಿಥಿಗಳಾಗಿ ಮಾಜಿಸಚಿವ ಕೆ. ಅಭಯಚಂದ್ರ, ಎಕ್ಸಲೆಂಟ್ ನ ಕಾರ್ಯದರ್ಶಿ ರಶ್ಮಿತಾ ಜೈನ್ ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಉದ್ಯಮಿ ಕೆ.ಶ್ರೀಪತಿ ಭಟ್ ಭಾಗವಹಿಸಲಿದ್ದಾರೆ. ಡಾ.ವಾದಿರಾಜ ಕಲ್ಲೂರಾಯರು ನಿರೂಪಿಸಲಿದ್ದಾರೆ.
ಗಂ 4ರಿಂದ ಪ್ರಸಿದ್ಧ ಕಲಾವಿದರಿಂದ ಗುರುದಕ್ಷಿಣೆ ಯಕ್ಷಗಾನ ತಾಳಮದ್ದಳೆ ಸಂಯೋಜಿಸಲಾಗಿದೆ.
