ಕಾರ್ಕಳ: ಯುವಕನೋರ್ವನಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವ ಘಟನೆ ನ. 02ರಂದು ವರದಿಯಾಗಿದೆ.

ಕಾರ್ಕಳ ಕಸಬಾ ಗ್ರಾಮದ ತಪ್ಸೀರ್ (18) ಇವರು ತನ್ನ ಅಣ್ಣನೊಂದಿಗೆ ಜರಿಗುಡ್ಡೆಯಲ್ಲಿರುವ ಮಸೀದಿಗೆ ನಮಾಜ್ ಮಾಡಲು ಸ್ಕೂಟರ್‌ನಲ್ಲಿ ಹೋಗುತ್ತಿರುವಾಗ ಅಪ್ರೋಜ್ ಎಂಬಾತನು ತನ್ನ ಗೂಡ್ಸ್ ಟೆಂಫೋವನ್ನು ಸ್ಕೂಟರ್‌ಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ. ಈ ಹಿಂದೆ ಈದ್ ಮಿಲಾದ್ ಹಬ್ಬದ ವೇಳೆಗೆ ಅಪ್ರೋಜ್ ಮನೆಯ ಬಳಿ ತೋರಣ ಕಟ್ಟುವ ವಿಚಾರದಲ್ಲಿ ಗಲಾಟೆ ಮಾಡಿರುವುದೇ ಈ ಘಟನೆಗೆ ಕಾರಣವಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
