ಕುಲಾಲ ಸಮಾಜ ಕಲ್ಯಾಣ ಸಂಘ (ರಿ) ಹೊಸ್ಮಾರು ಇದರ ನೂತನ ಸಮುದಾಯ ಭವನದ ಕಾಮಗಾರಿಯನ್ನು ಕಾಂಗ್ರೆಸ್ ನಾಯಕರಾದ ಉದಯ ಕೃಷ್ಣ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಉದಯ ಶೆಟ್ಟಿ ಮುನಿಯಾಲು ಪರಿಶೀಲನೆ ಮಾಡಿದರು.
ಈ ಕಾಮಗಾರಿಯನ್ನು ಪರಿಶೀಲಿಸಿದ ಅವರು ಕುಲಾಲ ಬಂಧುಗಳ ಅಭಿವೃದ್ಧಿಗಾಗಿ ಸಹಕಾರ ನೀಡುವುದೆಂದು ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಸುರೇಶ್ ಶೆಟ್ಟಿ ಸನ್ ಸೈನ್ ಹಾರ್ಡ್ವೇರ್ ಹೊಸ್ಮಾರು ಇದರ ಮಾಲಕರು, ಮತ್ತು ಈದು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಸದಾನಂದ ಪೂಜಾರಿ ಹಾಗೂ ಉದ್ಯಮಿಗಳಾದ ದಿಲೀಪ್ ಕೋಟ್ಯಾನ್ ಹಾಜರಿದ್ದರು.
ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಕುಲಾಲ್ ಇವರು ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರಮೋದ್ ಕುಲಾಲ್ ಸಮುದಾಯ ಭವನದ ಖರ್ಚು ವೆಚ್ಚದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಮಾಜಿ ಗೌರವಾಧ್ಯಕ್ಷರಾದ ಸುಂದರ ಕುಲಾಲ್ ಗೋಲಿದಲ್ಕೆ ಮತ್ತು ಯುವ ವೇದಿಕೆ ಅಧ್ಯಕ್ಷರಾದ ಮಹೇಂದ್ರ ಕುಲಾಲ್ ಸಂಘದ ಪ್ರಧಾನ ಕಾರ್ಯದರ್ಶಿ, ಮತ್ತು ಕಟ್ಟಡ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.


