ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಅಂಗನವಾಡಿಯಲ್ಲಿ ಸುಮಾರು 33 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶ್ರೀಮತಿ ಪುಷ್ಪಾ ಇವರಿಗೆ ಅದ್ದೂರಿ ಬೀಳ್ಕೊಡುಗೆ ಸಮಾರಂಭವು ನ. ೧ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ನಡೆಯಿತು.

ತಾಲೂಕಿಗೆ ಮಾದರಿ ರೀತಿಯಲ್ಲಿ ಕಡ್ತಲ ಗ್ರಾಮ ಪಂಚಾಯತ್ ಹಾಗೂ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳು ಸೇರಿ ಅದ್ದೂರಿಯಾದ ಬೀಳ್ಕೊಡುಗೆ ಸಮಾರಂಭ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡ್ತಲ ಗ್ರಾ.ಪಂ. ಅಧ್ಯಕ್ಷ ಸುಕೇಶ್ ಹೆಗ್ಡೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರುಣಾಕರ ಹೆಗ್ಡೆ, ಯೋಗೀಶ್ ಮಲ್ಯ, ವೈದ್ಯಾಧಿಕಾರಿ ಚಂದ್ರಿಕಾ ಕಿಣಿ ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ಟಿ., ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುರೇಖಾ, ಪ್ರಶಾಂತ್ ಬೆಳಿರಾಯ, ಹರೀಶ್ ಹೆಗ್ಡೆ, ಜಯಶ್ರೀ, ಶ್ರೀಮತಿ ಮತ್ತು ವಸಂತಿ ಉಪಸ್ಥಿತರಿದ್ದರು.

ಅರುಣ್ ಕುಮಾರ್ ಹೆಗ್ಡೆ ಕಾರ್ಯಕ್ರಮ ಸ್ವಾಗತಿಸಿದರು. ಶ್ವೇತಾ ನಿರೂಪಿಸಿದರು. ಶ್ರೀಮತಿ ಅಶ್ವಿನಿ ಧನ್ಯವಾದವಿತ್ತರು.
