ಕಾರ್ಕಳ: ನೀರೆ ಬಳಿ ಮಹೀಂದ್ರ ಬೊಲೆರೋ ವಾಹನಕ್ಕೆ ಮೋಟಾರ್ ಸೈಕಲ್ ಡಿಕ್ಕಿಯಾಗಿ ಮೋಟಾರ್ ಸೈಕಲ್ ಸವಾರ ಗಾಯಗೊಂಡ ಘಟನೆ ನ. ೦3ರಂದು ನಡೆದಿದೆ.

ಮಹೀಂದ್ರ ಬೊಲೆರೋ ವಾಹನದಲ್ಲಿ ಚಾಲಕ ಪ್ರವೀಣ್ ಕುಮಾರ್ ಹಾಗೂ ಹರಿಣಾಕ್ಷ.ಕೆ. ಯವರು ಕಾರ್ಕಳದಿಂದ ಉಡುಪಿಗೆ ಹೋಗುತ್ತಿರುವಾಗ ನೀರೆ ಬಳಿ ಸಂತೋಷ್ ಚೌವಾಣ್ ಮೋಟಾರ್ ಸೈಕಲ್‌ನ್ನು ಅತಿವೇಗದಿಂದ ಚಲಾಯಿಸಿಕೊಂಡು ಬಂದು ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕಾಲು ಮತ್ತು ಬಲಕೈಗೆ ರಕ್ತಗಾಯವಾಗಿ, ಚಿಕಿತ್ಸೆಗಾಗಿ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
