ಕಾರ್ಕಳ: ವ್ಯಕ್ತಿಯೋರ್ವರು ಕಾಲು ಜಾರಿ ತೋಡಿಗೆ ಬಿದ್ದು ಮೃತ್ಯುವಿಗೀಡಾದ ಘಟನೆ ನ. 04ರಂದು ವರದಿಯಾಗಿದೆ.

ಮಾಳ ಗ್ರಾಮದ ಕನೆಗುಂಡಿ ನಿವಾಸಿ ಶ್ಯಾಮ ಮೇರ (53) ಮೃತಪಟ್ಟವರು.
ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ಕೃಷಿ ಕೂಲಿಕೆಲಸ ಮುಗಿಸಿ ವಾಪಾಸು ಬರುತ್ತಿರುವಾಗ ಮಾಳ ಗ್ರಾಮದ ಮಲೆತೋಡು ಎಂಬಲ್ಲಿರುವ ತೋಡಿಗೆ ಕಾಲುಜಾರಿ ಬಿದ್ದು ತಲೆಯ ಹಿಂಬದಿಗೆ ಗಾಯವಾಗಿ ಮೃತಪಟ್ಟಿರುತ್ತಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
