ಕಾರ್ಕಳ

ನ. 9: ಗೆಳೆಯರ ಬಳಗ ಕಾಂತಾವರ ಇವರ ಆಶ್ರಯದಲ್ಲಿ ಕಾಂತಾರಡೊಂಜಿ ಸುಗ್ಗಿದ ಗೊಬ್ಬು

ಗೆಳೆಯರ ಬಳಗ ಕಾಂತಾವರ ಇವರ ಆಶ್ರಯದಲ್ಲಿ ೧೦ನೇ ವರ್ಷದ ಕಾಂತಾರಡೊಂಜಿ ಸುಗ್ಗಿದ ಗೊಬ್ಬು ಕಾರ್ಯಕ್ರಮವು ನ 9ರಂದು ಕಾಂತಾವರ ಅಂಬೋಡಿಮಾರು ಕೊಡಮಣಿತ್ತಾಯ ದೈವಸ್ಥಾನ ಬಳಿ ಬೆಳಿಗ್ಗೆ 8.30ರಿಂದ ನಡೆಯಲಿದೆ.


ಮುಖ್ಯಶಿಕ್ಷಕ ವಿಠ್ಠಲ ಶೆಟ್ಟಿ ಬೇಲಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಣ್ಣೆಕಳ ಕಾಂತಾವರ ಶ್ರೀನಿವಾಸ ಭಟ್ ಉದ್ಘಾಟಿಸಲಿದ್ದಾರೆ. ಸಾಹಿತಿಗಳು ಕಾಂತಾವರ ಡಾ. ನಾ ಮೊಗಸಾಲೆ , ಎಣ್ಣೆಕಳ ಕಾಂತಾವರ ಗುರುರಾಜ್ ಭಟ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ ೧೨ ಗಂಟೆಗೆ ಧರ್ಮದರ್ಶಿ , ಶ್ರೀ ಕ್ಷೇತ್ರ ಕಾಂತಾವರ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಕಾಂತಾವರ ದೇವಸ್ಥಾನ ಕೃಷ್ಣಮೂರ್ತಿ ಭಟ್ ಅವರು ಶುಭಾಶೀರ್ವಾದಗೈಯಲಿದ್ದಾರೆ. ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಬೇಲಾಡಿ ಬಾವ ಕಂಬಳಕೋಣಗಳ ಯಜಮಾನರು ಅಶೋಕಾನಂದ ಶೆಟ್ಟಿ ಅವರಿಗೆ ಸನ್ಮಾನ ನಡೆಯಲಿದೆ ಹಾಗೂ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾಟದಲ್ಲಿ ಜಯಗಳಸಿ ವಿಭಾ ಮಟ್ಟಕ್ಕೆ ಆಯ್ಕೆಯಾದ ಹಾಗೂ 10 ನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಶ್ರೀ ಕಾಂತೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.

ಕಾಂತಾವರ, ಬೇಲಾಡಿ , ಬಾರಾಡಿ, ಬೋಳ- ಪಿಲಿಯೂರು ಗ್ರಾಮಸ್ಥರಿಗೆ ವಿವಿಧ ಕ್ರೀಡೆಗಳು ನಡೆಯಲಿದೆ ಎಂದು ಗೆಳೆಯರ ಬಳಗ ಕಾಂತಾವರದ ಅಧ್ಯಕ್ಷ ಆಶಿಕ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಬೆಳ್ಮಣ್ ಗ್ರಾಮ ಪಂಚಾಯತ್‌ನ ನೂತನ ಮಾರುಕಟ್ಟೆ ಸಂಕೀರ್ಣಕ್ಕೆ ಶಿಲಾನ್ಯಾಸ ಹಾಗೂ ಸರ್ಕಾರದ ವಿವಿಧ ಸವಲತ್ತುಗಳ ವಿತರಣೆ

Madhyama Bimba

ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ದೀಪಾವಳಿಗಾಗಿ    ವಿಶೇಷ ರಿಯಾಯಿತಿ

Madhyama Bimba

ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ : ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More