ಕಾರ್ಕಳ

ಪುರಸಭೆ ವ್ಯಾಪ್ತಿಯಲ್ಲಿ ಅಸಮರ್ಪಕ ಕಸ ವಿಲೇವಾರಿ ತಕ್ಷಣ ಕ್ರಮಕ್ಕೆ ಆಗ್ರಹ : ಶಾಸಕರ ಮೌನಕ್ಕೆ‌ ಆಕ್ರೋಶ ನಮ್ಮೂರಿಗೂ ಒಬ್ಬ ಜನಪರ ಕಾಳಜಿಯ ಶಾಸಕ ಬೇಕಿತ್ತು- ಶುಭದರಾವ್

ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಮನೆಗಳಿಂದ ಮತ್ತು ವಾಣಿಜ್ಯ ಸಂಕೀರ್ಣಗಳಿಂದ ಕಸ ಸಂಗ್ರಹ ಮಾಡದ ಪರಿಣಾಮ ಎಲ್ಲಾ ಕಡೆಯಲ್ಲಿಯೂ ಕಸದ ರಾಶಿಯಿಂದಾಗಿ ಗಬ್ಬು ವಾಸನೆ ಬೀರುತಿದ್ದು ಸಾರ್ವಜನಿಕರು ನಡೆದಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ ಪುರಸಭೆ ತಕ್ಷಣ ಕ್ರಮ ಜರುಗಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಶಾಸಕರ ನಿರ್ಲಕ್ಷ ಸರಿಯಲ್ಲ. ನಮ್ಮೂರಿಗೂ ಒಬ್ಬ ಜನಪರ ಕಾಳಜಿಯ ಒಬ್ಬ ಶಾಸಕ ಇರಬೇಕಿತ್ತು ಎಂದೆನಿಸುತ್ತಿದೆ ಎಂದು ಪುರಸಭೆಯ ನಿಕಟಪೂರ್ವ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಖಾಸಗಿ ಸಂಸ್ಥೆಯವರು ಕಸ ವಿಂಗಡೆಯ ಜವಾಬ್ದಾರಿ ವಹಿಸಿಕೊಂಡಿದ್ದ ಪರಿಣಾಮ ಸಮರ್ಪಕವಾಗಿ‌ ಕಸ ವಿಲೇವಾರಿಯಾಗುತ್ತಿತ್ತು. ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಉತ್ತಮ ಸೇವೆಯನ್ನು ಮಾಡುತ್ತಿದ್ದರು. ಆದರೆ ಅವರಿಗೆ ನೀಡಿದ ರಾಜಕೀಯ ಪ್ರೇರಿತವಾದ ಕಿರುಕುಳದ ಪರಿಣಾಮ ಅವರು ಅರ್ಧದಲೇ ಬಿಟ್ಟುಹೋದ ಪರಿಣಾಮ ಸಾರ್ವಜನಿಕರು ಸಮಸ್ಯೆಯನ್ನು ಅನುಭವಿಸುವಂತಾಗಿದೆ.

ನಮ್ಮ ಆಡಳಿತದ ಅವಧಿಯಲ್ಲಿ ಕಸ ವಿಲೇವಾರಿಯಲ್ಲಿ ಕಾರ್ಕಳ ಪುರಸಭೆಯು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗೆ ಪಾತ್ರವಾಗಿತ್ತು. ಆದರೆ ಈಗಿನ ಪರಿಸ್ಥಿತಿ ಚಿಂತಾಜನಕವಾಗಿದೆ ಶಾಸಕರು ತಕ್ಷಣ ಕಾಳಜಿ ವಹಿಸಿ ಕ್ರಮ ಜರುಗಿಸಲು ಪ್ರಯತ್ನಿಸಬೇಕು ಎಂದು ಶುಭದರಾವ್ ಆಗ್ರಹಿಸಿದ್ದಾರೆ.

Related posts

ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘಕ್ಕೆ ಸುವರ್ಣ ಸಂಭ್ರಮ: ಸಮಾಲೋಚನಾ ಸಭೆ

Madhyama Bimba

ಕಾರ್ಕಳ ಬೈಲೂರು ಕಣಜಾರು ಪಳ್ಳಿ ಮಾರ್ಗದಲ್ಲಿ ಸ್ಥಗಿತಗೊಂಡ ಬಸ್ಸು ಪುನರಾರಂಭಕ್ಕೆ ಒತ್ತಾಯ

Madhyama Bimba

ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಲ್ಲಿ ಕಳ್ಳತನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More