ಕಾರ್ಕಳಹೆಬ್ರಿ

ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾಷಿ೯ಕ ಮಹಾಸಭೆ -228.73 ಕೋಟಿ ವ್ಯವಹಾರದಿಂದ ರೂ.97.63 ಲಕ್ಷ ಲಾಭ- ಶೇ.16 ಪಾಲು ಲಾಭಾಂಶ

ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. 20ರಂದು ನೆಲ್ಲಿಕಾರು ಶ್ರೀ ಅನಂತನಾಥ ಸ್ವಾಮಿ ಬಸದಿಯ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ಜಯವರ್ಮ ಯಂ. ಜೈನ್ ಅಧ್ಯಕ್ಷತೆ ವಹಿಸಿ ಸಂಘವು ರೂ. 45.82 ಕೋಟಿ ಠೇವಣಾತಿ ಹೊಂದಿದ್ದು, ವರದಿ ಸಾಲಿನಲ್ಲಿ ಸದಸ್ಯರಿಗೆ ರೂ.36.62 ಕೋಟಿ ಸಾಲ ನೀಡಿದ್ದು, ಸದಸ್ಯರಿಂದ ಬರತಕ್ಕ ಸಾಲ ಶೇ. 100 ವಸೂಲಾತಿಯಾಗಿ, ವರ್ಷಾಂತ್ಯಕ್ಕೆ ರೂ. 33.87 ಕೋಟಿ ಹೊರಬಾಕಿ ಸಾಲ ಇರುತ್ತದೆ. ಸಂಘವು 55.91 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ವರದಿ ವರ್ಷದಲ್ಲಿ 228.73 ಕೋಟಿ ವ್ಯವಹಾರ ನಡೆಸಿ ರೂ.97.63 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ.

ಸಂಘದಲ್ಲಿನ ಪ್ರಗತಿಯ ಬಗ್ಗೆ ವಿವರಣೆ ನೀಡಿ, ಸಂಘವು ಸತತ 2010-11 ರಿಂದ ಸತತ 16 ವರ್ಷಗಳಿಂದ ಹಾಗೂ ಒಟ್ಟು 25 ವರ್ಷಗಳಲ್ಲಿ ಸದಸ್ಯರಿಂದ ಬರತಕ್ಕ ಸಾಲವನ್ನು ಶೇ. 100 ಸಾಲ ವಸೂಲಾತಿ ಮಾಡಿದ ಸಾಧನೆಯ ಬಗ್ಗೆ ಸಭೆಯಲ್ಲಿ ತಿಳಿಸಿ, 2025-26 ನೇ ಸಾಲಿನಲ್ಲಿ ಸಂಘವು ಶೇ.100 ಸಾಲ ವಸೂಲಾತಿ ಮಾಡಿದ ಸಾಧನೆಗೆ ಆ.22 ರಂದು ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಪರವಾಗಿ ಸಂಘದ ಅಧ್ಯಕ್ಷರನ್ನು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರನ್ನು ಸನ್ಮಾನಿಸಿರುವ ಬಗ್ಗೆ ತಿಳಿಸಿ, ಸತತವಾಗಿ ಸಂಸ್ಥೆಯ ಬೆಳವಣಿಗೆಗೆ ಕಾರಣರಾದ ಸಂಘದ ಆಡಳಿತ ಮಂಡಳಿಯ ನಿರ್ದೇಶಕರನ್ನು, ಎಲ್ಲಾ ಸದಸ್ಯರನ್ನು, ಸಿಬ್ಬಂದಿ ವರ್ಗದವರನ್ನು ಪ್ರಶಂಶಿಸಿ, ಶೇ.16 ಪಾಲು ಲಾಭಾಂಶವನ್ನು ಘೋಷಣೆ ಮಾಡಿ, ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಸಂಘದ ಉಪಾಧ್ಯಕ್ಷರಾದ ಉದಯ ಪೂಜಾರಿ, ಹಾಗೂ ನಿರ್ದೇಶಕರಾದ ಪದ್ಮನಾಭ ವಿ ಕೋಟ್ಯಾನ್, ಫ್ರೆಡ್ರಿಕ್ ಪಿಂಟೋ, ಸದಾನಂದ ಪೂಜಾರಿ, ರುಕ್ಕಯ್ಯ ಪೂಜಾರಿ, ಅಶ್ವಥ್, ಶಂಕರ ಗೌಡ, ಬಾಬು, ಶ್ರೀಮತಿ ಪ್ರೀತಿ ಯನ್, ಶ್ರೀಮತಿ ಲಕ್ಷ್ಮೀ, ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿಯಾದ ಸಂಜಯ್ ಅತಿಕಾರಿ ಉಪಸ್ಥಿತರಿದ್ದರು.

ನಿವೃತ್ತ ಮುಖ್ಯ ಕಾರ್ಯ ನಿರ್ವಹಾಧಿಕಾರಿಯಾದ ಅರುಣ್ ಕುಮಾರ್ ಯನ್., ನೇಮಿಚಂದ್ರ ಜೈನ್, ನಿವೃತ್ತ ಶಾಖಾವ್ಯವಸ್ಥಾಪಕರಾದ ಉದಯ ಕುಮಾರ್ ಯನ್. ಭಾಗವಹಿಸಿದ್ದರು.

ಸಂಘದ ಸಿಬ್ಬಂದಿಯಾದ ಶ್ರವಣ್ ಕುಮಾರ್ ಪ್ರಾರ್ಥನೆಗೈದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಆದರ್ಶ್ ಜೈನ್ ಸ್ವಾಗತಿಸಿ, ಸಂಘದ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರಗಳನ್ನು ಮಂಡಿಸಿದರು. ಶ್ರೀಮತಿ ಸುವೀಕ್ಷಾ ವಂದಿಸಿದರು.

Related posts

ಸೂರಾಲು: ಭಜನಾ ಸಂಕೀರ್ತನೆಯೊಂದಿಗೆ ಭಕ್ತಿಯ ನಡಿಗೆ ಮಿಯ್ಶಾರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಡೆಗೆ

Madhyama Bimba

ಕಾರ್ಕಳ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್‌ನ ನೂತನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ರಾಕೇಶ್ ಅಮೀನ್ ಪ್ರಧಾನ ಕಾರ್ಯದರ್ಶಿಯಾಗಿ ಅನೀಶ್ ತೆಂಡೂಲ್ಕರ್

Madhyama Bimba

ಮೈಸೂರು ದಸರಾ ಸಿಎಂ ಕಪ್ ರಾಜ್ಯ ಮಟ್ಟದ ಕ್ರೀಡಾಕೂಟ: ವೆಂಕಟರಮಣ ಮಹಿಳಾ ಕಾಲೇಜಿನ ಪವಿತ್ರ ದ್ವಿತೀಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More