ನಾಳೆ ಆದಿತ್ಯವಾರದ ದಿನ ಹೈನುಗಾರಿಕೆ ಮಾಡುವವರಿಗೆ ಬಹಳಷ್ಟು ಸಂತಸ ಪಡುವ ದಿನ. ಅದೆಷ್ಟೋ ಮಂದಿ ರೈತರು ದನ ಕಳ್ಳರ ವಿರುದ್ಧ ತೊಡೆ ತಟ್ಟುವ ದಿನ.
ಹೌದು ನಾಳೆ ಬಜಗೋಳಿಯ ಡಾ. ರವೀಂದ್ರ ಶೆಟ್ಟಿಯವರು ದನ ಕಳ್ಳತನ ಆದ ಮನೆಗಳಿಗೆ ಗೋ ಮಾತೆಯನ್ನು ದಾನವಾಗಿ ನೀಡುವ ಮೂಲಕ ಹಿಂದೂ ಸಮಾಜದಲ್ಲಿ ಸಂಘಟನೆಯ ವಿಶಿಷ್ಟ ಕ್ರಾಂತಿಯನ್ನು ಮಾಡುತ್ತಾರೆ.
🌹4 ನೇ ವರ್ಷದ ಸಂಭ್ರಮ🌹
ಬಜಗೋಳಿಯ ಡಾ. ರವೀಂದ್ರ ಶೆಟ್ಟಿಯವರಲ್ಲಿ ಗೋ ಮಾತೆಯನ್ನು ದಾನವಾಗಿ ನೀಡಬೇಕು ಎಂಬ ಕಲ್ಪನೆ ಹುಟ್ಟಿದ್ದು ಮಾತ್ರ ವಿಶೇಷ. ಬಹುಷಃ ಹಿಂದೂ ಸಮಾಜವನ್ನು ಪ್ರೀತಿಸುವ ಜೊತೆಗೆ ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎನ್ನುವ ಹೃದಯ ಮಂದಿರದಲ್ಲಿ ಉಂಟಾಗುವ ಚಿಂತನೆಗಳು ಕೆಲವೇ ಕೆಲವು ಮಂದಿಯಲ್ಲಿ ಉಗಮ ಆಗಲು ಸಾಧ್ಯ.
ಇಂತಹ ಚಿಂತನೆಯು ಡಾ. ರವೀಂದ್ರ ಶೆಟ್ಟಿ ಎಂಬ ಹಿಂದೂ ಕ್ರಾಂತಿಕಾರಿಯಲ್ಲಿ ಹುಟ್ಟುವ ಮೂಲಕ ಹಿಂದೂ ಸಮಾಜದಲ್ಲಿ ಒಗ್ಗೂಡುವಿಕೆಯ ಶಂಖ ನಾದ ಮೂಡುವ ಮೂಲಕ ಆರಂಭಗೊಂಡಿತು.
ಹಿಂದುತ್ವ ಎಂದರೆ ಕೇವಲ ಮೈಕ್ ಮೂಲಕ ಹೊರ ಹೊಮ್ಮಿ, ಯುವಕರಲ್ಲಿ ಗೊಂದಲ ಮೂಡಿಸುವ ಬದಲಾಗಿ ಅವರು ಹಿಂದೂಗಳಲ್ಲಿ ಪ್ರೀತಿಯ ಸಿಂಚನ ರೂಪಿಸುವ ಮೂಲಕ ಮಾದರಿ ಆಗಿದ್ದಾರೆ.
ಪ್ರತಿ ವರ್ಷ ಕೂಡ ಹಲವಾರು ರೈತರ ಮನೆಗಳಲ್ಲಿ ಡಾ ರವೀಂದ್ರ ಶೆಟ್ಟಿಯವರ ಸಹಕಾರ ಇರುತ್ತದೆ.
ತಾನು ಶ್ರಮ ಪಟ್ಟ ಉದ್ಯಮದಲ್ಲಿ ಉಳಿಕೆ ಆದ ಹಣದಿಂದ ಹಿಂದೂ ಸಮಾಜ ಕಟ್ಟುವ ಅವರ ಬದುಕಿನ ಹೋರಾಟದ ಪರಿ ಮಾತ್ರ ಅವರ ಬದುಕನ್ನು ತಿಳಿದವರಿಗೆ ಮಾತ್ರ ತಿಳಿಯುತ್ತದೆ.
ದಾನಕ್ಕಾಗಿ ಲಕ್ಷಾಂತರ ಮೊತ್ತ ನೀಡುತ್ತಿದ್ದ ಅವರ ಮಾನವೀಯತೆಯ ಗುಣದ ಬಗ್ಗೆ ನಾವು ಕೂಡ ಒಮ್ಮೆ ಪ್ರಶ್ನೆ ಮಾಡಿದ್ದೆವು.
ಶೆಟ್ರೇ, ಹೀಗೆಲ್ಲ ನೀವು ದಾನ ಕೊಡ್ತಾ ಹೋದ್ರೆ, ಮುಂದಿನ ನಿಮ್ಮ ಭವಿಷ್ಯ ಬಹಳ ಸಂಕಟ ತರಬಹುದು ಎಂದು ಎಚ್ಚರಿಸಿದ್ದೆವು.
ಆ ಮಾತಿಗೆ ಅವರು ಹೇಳಿದ ಮಾತು ಮಾತ್ರ ಬಹಳ ಮನ ಮುಟ್ಟುವಂತಹದ್ದು.
ನೋಡಿ, ನೀವು ಹೇಳಿದ್ದು ಸರಿ, ನಾನು ವ್ಯವಹಾರ ಕ್ಷೇತ್ರಕ್ಕೆ ಬರೋವಾಗ ನನ್ನಲ್ಲಿ ಬಹಳ ಆರ್ಥಿಕವಾಗಿ ಸ್ಥಿತಿ ಹಾಳಾಗಿತ್ತು. ಆದ್ರೆ ಭಗವಂತ ನನಗೆ ಆಶೀರ್ವಾದ ಮಾಡಿದ್ದಾರೆ.
ನನ್ನ ಅಂದಿನ ಸಂಕಷ್ಟದ ದಿನಗಳ ರೀತಿಯಲ್ಲೇ ಹಲವಾರು ಮಂದಿ ಇಂದು ಸಂಕಷ್ಟದಲ್ಲಿದ್ದಾರೆ. ಅಂತಹವರನ್ನು ಗುರುತಿಸಿ ಕಿಂಚಿತ್ತಾದರೂ ಸಹಕಾರ ನೀಡಬೇಕು ಎಂಬ ಪ್ರೇರಣೆ ನನಗೆ ಭಗವಂತ ನೀಡಿದ್ದಾನೆ.
ಆತ ನೀಡಿದ ಪ್ರೇರಣೆಯನ್ನು ಶಿರಸಾ ಪಾಲಿಸುತ್ತಿದ್ದೇನೆ. ಹಣವನ್ನು ಕಟ್ಟಿಡುವ ಮಟ್ಟಿಗೆ ನಾನು ಬೆಳೆದಿಲ್ಲ. ನನ್ನ ಉದ್ಯಮದಿಂದ ಉಳಿಯುವ ಸ್ವಲ್ಪ ಮೊತ್ತವನ್ನು ದಾನ ಮಾಡುತ್ತಿದ್ದೇನೆ ಎಂದು.
ಅವರ ಈ ಮಾತುಗಳು ಬಹಳ ಶ್ರೇಷ್ಠವಾದುದು ಎಂಬುದನ್ನು ನಾವು ಕೂಡ ಅಂದು ಕಂಡು ಕೊಂಡಿದ್ದೇವೆ.
ಇಂದಿನ ಕಾಲಘಟ್ಟದಲ್ಲಿ ಹಣವನ್ನು ಕಟ್ಟಿಡುವವರೇ ಹೆಚ್ಚಾಗಿದ್ದಾರೆ. ಕಟ್ಟಿಡುವ ಹಣ ಕೊನೆ ಕಾಲಕ್ಕೆ ಅವರಿಗೂ ಸಿಕ್ಕದೆ ಯಾರದೋ ಪಾಲಾಗುತ್ತದೆ.
ಇಂತಹ ವಿಚಾರಗಳನ್ನು ವಿಮರ್ಶೆ ಹಾಗೂ ಅವಲೋಕನ ಮಾಡಿದಾಗ ಡಾ. ರವೀಂದ್ರ ಶೆಟ್ಟಿ ಎಂಬ ವ್ಯಕ್ತಿ ಸಾಮಾಜಿಕವಾಗಿ ಹಾಗೂ ಹಿಂದೂ ಸಮಾಜದಲ್ಲಿ ಅಗ್ರ ಗಣ್ಯವಾಗಿ ನಿಲ್ಲುತ್ತಾರೆ.
ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಬಜಗೋಳಿಯಲ್ಲಿ ಗೋ ದಾನದ ಪುಣ್ಯ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಹಳಷ್ಟು ಮಂದಿ ಗಣ್ಯರು ಭಾಗವಹಿಸುತ್ತಾರೆ
ನಾವು ಕೂಡ ಭಾಗವಹಿಸೋಣ
previous post
next post