ಕಾರ್ಕಳ

ಈದು: ಮಗುವಾಗಿ ಕೆಲಸಕ್ಕೆ ಹೋಗಲು ಆಗುತ್ತಿಲ್ಲವೆಂದು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ

ಕಾರ್ಕಳ: ಕಷ್ಟಪಟ್ಟು ಓದಿ ಮದುವೆಯಾಗಿ, ಮಗುವಾಗಿ, ಕೆಲಸಕ್ಕೆ ಹೋಗಲು ಆಗುತ್ತಿಲ್ಲವೆಂದು ಖಿನ್ನತೆಗೊಳಗಾಗಿ ಶಿಕ್ಷಕಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ವಿಭಿನ್ನ ಪ್ರಕರಣವೊಂದು ಈದು ಗ್ರಾಮದಲ್ಲಿ ನಡೆದಿದೆ.

ಪ್ರಸನ್ನಾ (29) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಮೂಡುಬಿದಿರೆಯ ನಿವಾಸಿ ಪ್ರಸನ್ನಾ ಕಾರ್ಕಳ ತಾಲೂಕು ಈದು ಗ್ರಾಮದ ರಾಜೇಶ್ ಎಂಬವರೊಂದಿಗೆ 2022ರಲ್ಲಿ ಮದುವೆಯಾಗಿತ್ತು. ರಾಜೇಶ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಸನ್ನಾ ಹೊಸ್ಮಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇವರಿಗೆ ಮದುವೆಯಾಗಿ 10 ತಿಂಗಳ ಹೆಣ್ಣು ಮಗು ಇದ್ದು, ಈಕೆ ತನ್ನ ತಾಯಿ ಮನೆಗೆ ಫೋನಾಯಿಸಿ ಗಂಡನ ಮನೆಯವರು ಚೆನ್ನಾಗಿ ನೋಡುತ್ತಿದ್ದಾರೆಂದು ಹೇಳುತ್ತಿದ್ದಳು. ಆದರೆ ನನಗೆ ಇಷ್ಟು ಬೇಗ ಮಗು ಬೇಡವಾಗಿತ್ತು ನಾನು ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದು ಇದೇ ಕೊರಗಿನಿಂದ ಖಿನ್ನತೆಗೆ ಒಳಗಾಗಿದ್ದಳು. ಈ ಬಗ್ಗೆ ಪ್ರಸನ್ನಾರವರನ್ನು ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪ್ರಸನ್ನಾ ತಾನು ಇಷ್ಟು ಓದಿದರೂ ತನಗೆ ಮಗುವಾದ ಕಾರಣ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿ ನ. 6ರಂದು ಗಂಡನ ಮನೆಯ ಡೈನಿಂಗ್ ಹಾಲ್ ನಿಂದ ಮಹಡಿಗೆ ಹೋಗುವ ಮೆಟ್ಟಿಲಿನ ಸ್ಟೀಲ್ ರಾಡಿಗೆ ಚೂಡಿದಾರ ಶಾಲ್ ನಿಂದ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕ್ರಿಯೇಟಿವ್ ಕಾಲೇಜಿನಲ್ಲಿ ಮೈಸೂರು ವಿಭಾಗೀಯ ಮಟ್ಟದ ಸಾಂಸ್ಕೃತಿಕ ಮತ್ತು ಪಠ್ಯೇತರ ಸ್ಪರ್ಧೆಗಳು

Madhyama Bimba

ಕಾರ್ಕಳ: ನಲ್ಲೂರು ನಿವಾಸಿಗೆ ಹಾವು ಕಚ್ಚಿ ಮೃತ್ಯು

Madhyama Bimba

ಅಜೆಕಾರು: ಬಾವಿಗೆ ಹಾರಿ ಬಾಲಕ ಆತ್ಮಹತ್ಯೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More