ಕಾರ್ಕಳದಲ್ಲಿ ಪುರಸಭಾ ಸದಸ್ಯ ಸೀತಾರಾಮ್ ರವರು ಮಹಾಬಲ ಮೂಲ್ಯ ರ ಮೇಲೆ ಬಡಿಗೆಯಲ್ಲಿ ಮಾಡಿರುವ ಹಲ್ಲೆ ಪ್ರಕರಣ ಬಗ್ಗೆ ಸಾಮಾಜಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸೀತಾರಾಮರು ದೊಣ್ಣೆಯಲ್ಲಿ ಹೊಡೆದ ಹೊಡೆತ ಯಾವ ಹಂತದಲ್ಲಿ ಇದೆ ಎಂದರೆ ಅವರ ಹೊಡೆತಕ್ಕೆ ಮಹಾಬಲ ಮೂಲ್ಯರ ಮೊಣ ಕಾಲು ತುಂಡಾಗಿ ಚರ್ಮದಲ್ಲಿ ನೇತಾಡುತ್ತಿತ್ತು. ಅಷ್ಟರ ಮಟ್ಟಿನ ಕ್ರೂರ ಪ್ರವೃತ್ತಿ ಸೀತಾರಾಮರದ್ದು.
ಕುಲಾಲ ಯುವ ವೇದಿಕೆ ಆಕ್ರೋಶ
ಈ ಘಟನೆಯನ್ನು ಕಂಡ ಕುಲಾಲ ಯುವ ವೇದಿಕೆ ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದೆ.
ಇಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ಡಿ ವೈ ಎಸ್ ಪಿ ಅರವಿಂದ ಕಲಗುಜ್ಜಿ, ನಗರ ಠಾಣಾ ಎಸ್ ಐ ಸಂದೀಪ್ ಶೆಟ್ಟಿಯವರಿಗೆ ಈ ಬಗ್ಗೆ ಕ್ರಮ ಕೈ ಗೊಳ್ಳುವಂತೆ ಮನವಿ ಮಾಡಿದೆ.
ಕುಲಾಲ ಯುವ ವೇದಿಕೆಯ ಜಿಲ್ಲಾಧ್ಯಕ್ಷ ದಿವಾಕರ ಬಂಗೇರ, ಕಾರ್ಕಳ ಕುಲಾಲ ಸಂಘದ ಅಧ್ಯಕ್ಷ ಹರೀಶ್ಚಂದ್ರ ಕುಲಾಲ್, ಕಾರ್ಕಳ ಕುಲಾಲ ಯುವ ವೇದಿಕೆಯ ಅಧ್ಯಕ್ಷ ಉದಯ ಕುಲಾಲ ಹೆರ್ಮುಂಡೆ ಕುಲಾಲ ಸಂಘದ ಕಾರ್ಯದರ್ಶಿ ಹೃದಯ ಕುಲಾಲ್, ಹೆಬ್ರಿ ಕುಲಾಲ ಸಂಘದ ಅಧ್ಯಕ್ಷ ಸುರೇಂದ್ರ ಕುಲಾಲ್ ವರಂಗ, ಕಾರ್ಕಳ ಕುಲಾಲ ಯುವ ವೇದಿಕೆಯ ಕಾರ್ಯದರ್ಶಿ ಸಂದೇಶ್, ಮತ್ತಿತರ ಯುವ ವೇದಿಕೆ ಸದಸ್ಯರು ಮನವಿ ಸಂದರ್ಭದಲ್ಲಿದ್ದರು.
ತಕ್ಷಣವೇ ಆರೋಪಿಯನ್ನು ಬಂಧನ ಮಾಡದಿದ್ದರೆ ತಾಲೂಕಿನಾದ್ಯoತ ತೀವ್ರ ಹೋರಾಟ ಮಾಡುವುದಾಗಿ ಯುವ ವೇದಿಕೆ ಎಚ್ಚರಿಸಿದೆ

