ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ ಇದರ ಶಿಕ್ಷಕ-ರಕ್ಷಕ ಸಂಘದ ಸಭೆಯು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಪ್ರಾಚಾರ್ಯರಾದ ಪ್ರೊ. ಕ್ಸೇವಿಯರ್ ಡಿಸೋಜ, ಕನ್ಯಾನ ಇವರು ಆಗಮಿಸಿದ್ದರು.
ಪ್ರೊ. ಕ್ಸೇವಿಯರ್ ಡಿಸೋಜ ಇವರು ಮಾತನಾಡಿ ಮಕ್ಕಳ ಬಾಲ್ಯ ಹಾಗೂ ಹೆತ್ತವರ ಬಾಲ್ಯ, ಹೆತ್ತವರು ಮಕ್ಕಳೊಂದಿಗೆ ಹೇಗೆ ಮಾತನಾಡಬೇಕು, ಯಾವ ರೀತಿ ಮಕ್ಕಳ ಮನಸ್ಥಿತಿಯನ್ನು ಅರಿತುಕೊಳ್ಳಬೇಕು. ಅಪ್ಪ ಅಮ್ಮನಿಗೆ ಆಸರೆ ಆಗಬೇಕಾದರೆ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಎಂಬುದನ್ನು ವಿವರಿಸಿದರು. ನಂತರ ಪೋಷಕರಿಗೆ ಚರ್ಚೆಗೆ ಅವಕಾಶ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಯೋಜಕರಾದ ಡಾ. ದಯಾನಂದ ನಾಯ್ಕ್ ಇವರು ನಮ್ಮ ಹೆತ್ತವರನ್ನು ನಾವು ಚೆನ್ನಾಗಿ ನೋಡಿಕೊಂಡರೆ ನಮ್ಮನ್ನು ನಮ್ಮ ಮಕ್ಕಳು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಮಕ್ಕಳನ್ನು ಆ ರೀತಿ ಬೇಳೆಸಿ ಎಂಬ ಕಿವಿ ಮಾತನ್ನು ಹೆತ್ತವರಿಗೆ ಹೇಳಿದರು.
ಈ ಸಂದರ್ಭದಲ್ಲಿ 2024-25ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆಯು ಜರುಗಿತು. ಕಾರ್ಯಧ್ಯಕ್ಷರಾಗಿ ಶೀಮತಿ ಕಾವೇರಮ್ಮ, ಉಪಾಧ್ಯಕ್ಷರಾಗಿ ಎಂ ಬೂಬ ಕುಮಾರ್, ಸಹ ಕಾರ್ಯದರ್ಶಿಗಳಾಗಿ ಶ್ರೀಮತಿ ಶಾಹೀನಾ ಬಾನು, ಸದಸ್ಯರಾಗಿ ಶ್ರೀಮತಿ ಸುಮಿತ್ರ, ಶ್ರೀಮತಿ ಭಾರತಿ ಹಾಗೂ ಶ್ರೀಮತಿ ಜಾನಕಿ ಆಯ್ಕೆಯಾದರು. ಶಿಕ್ಷಕರ ವತಿಯಿಂದ ಅಧ್ಯಕ್ಷರಾಗಿ ಡಾ. ದಯಾನಂದ ನಾಯ್ಕ್, ಕಾರ್ಯದರ್ಶಿಗಳಾಗಿ ಶ್ರೀಮತಿ ಆಶಾ ಶಾಲೆಟ್ ಡಿಸೋಜಾ, ಖಜಾಂಚಿಯಾಗಿ ರವಿರಾಜ್ ಬಿ. ಜಿ, ಸದಸ್ಯರಾಗಿ ಡಾ. ಅಜಿತ್ ಕುಮಾರ್ ಡಿಸೋಜ, ಡಾ. ಸುಜಾತ, ಶ್ರೀಮತಿ ಮಂಜುಶ್ರಿ ಆಯ್ಕೆಯಾದರು. ನಂತರ ನಿರ್ಗಮನ ಅಧ್ಯಕ್ಷರಾದ ರಾಜೇಶ್ ದೇವಾಡಿಗ ಇವರು ನೂತನ ಚುನಾಯಿತ ಪದಾಧಿಕಾರಿಗಳಿಗೆ ಹೂ ನೀಡಿ ಅಭಿನಂದಿಸಿದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕಿ ಪುಷ್ಪ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಆಶಾ ಶಾಲೆಟ್ ಡಿಸೋಜಾ ಕಳೆದ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಂಘದ ವರದಿಯನ್ನು ವಾಚಿಸಿದರು. ಉಪನ್ಯಾಸಕಿ ಡಾ. ಸುಜಾತ ವಂದಿಸಿದರು. ವಿದ್ಯಾರ್ಥಿನಿ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.