ಕಾರ್ಕಳ: ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೀವನಕ್ಕೆ ಕ್ರೀಡೆ ಅತ್ಯಗತ್ಯವಾಗಿದೆ. ಗೆದ್ದವರು ಯಾವತ್ತೂ ಬೀಗಬಾರದು. ಸೋತವರು ಕುಗ್ಗಬಾರದು. ಕ್ರೀಡೆ ಮತ್ತು ಓದು, ಈ ಎರಡನ್ನೂ ಪ್ರತೀ ವಿದ್ಯಾರ್ಥಿಯೂ ತೂಗಿಸಿಕೊಂಡು ಮುಂದೆ ಬರಬೇಕು. ಹಾಗೆ ಮಾಡುವುದರಿಂದ ಸಮತೋಲನದ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಜಾರ್ಕಳದ ಉದ್ಯಮಿ ನಾಗರಾಜ ತಂತ್ರಿ ಹೇಳಿದರು.
ಅವರು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇದರ ಪದವಿಪೂರ್ವ ಹಾಗೂ ಪದವಿ ಕಾಲೇಜಿನ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಪ್ರಾಚಾರ್ಯರಾದ ಡಾ. ಮಂಜುನಾಥ ಎ ಕೋಟ್ಯಾನ್ ಅವರು ವಿದ್ಯಾರ್ಥಿಯಾಗಿದ್ದಾಗಲೇ ಕ್ರೀಡೆಯಲ್ಲಿದ್ದುಕೊಂಡು ಸಮಾಜ ಸೇವೆಯತ್ತ ಮುಖ ಮಾಡಿದವರು ನಾಗರಾಜ ತಂತ್ರಿಗಳು. ಅವರು ನಮ್ಮ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಇಲ್ಲಿ ಯಾರೂ ಗೆದ್ದರೂ ಯಾರೂ ಸೋತರೂ ನಮಗೆ ಅವರಿಬ್ಬರೂ ಸಮಾನರು. ಎಲ್ಲವನ್ನೂ ಸಮಾನ ಚಿತ್ತದಿಂದ ಎದುರಿಸಿ ಜೀವನದಲ್ಲಿ ಮುಂದೆ ಬರಬೇಕು ಎಂದರು.
ಪದವಿ ಮತ್ತು ಪದವಿಪೂರ್ವ ವಿಭಾಗದಲ್ಲಿ ಉತ್ತಮ ಪಥ ಸಂಚಲನ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ, ದತ್ತಾತ್ರೇಯ ಮಾರ್ಪಳ್ಳಿ. ಪದವಿ ಕ್ರೀಡಾ ಕಾರ್ಯದರ್ಶಿಗಳಾದ ಅನುಷ್, ನಿರೀಕ್ಷಾ, ಪದವಿಪೂರ್ವ ಕಾರ್ಯದರ್ಶಿಗಳಾದ ಅಜಿತ್, ಪ್ರತೀಕ್ಷಾ ಉಪಸ್ಥಿತರಿದ್ದರು.
ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರೋ. ರಮೇಶ್ ಎಸ್.ಸಿ. ಸ್ವಾಗತಿಸಿ, ಕ್ರೀಡಾ ನಿರ್ದೇಶಕರಾದ ನವೀನ್‌ಚಂದ್ರ ವಂದಿಸಿದರು. ಅನನ್ಯ ಕಾರ್ಯಕ್ರಮ ನಿರೂಪಿಸಿದರು.
:>