ಮೂಡುಬಿದಿರೆ

ಆಳ್ವಾಸ್ ವಿರಾಸತ್ ಶಾಸ್ತ್ರೀಯ ಯುವಸಂಪದ (ಭಾರತೀಯ ಶಾಸ್ತ್ರೀಯ ಯುವಕಲಾಸಕ್ತರ ಸಮಾವೇಶ)

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ವು ಆಳ್ವಾಸ್ ವಿರಾಸತ್-2024ನ್ನು ಮತ್ತಷ್ಟು ಸಮಾಜಮುಖಿಯನ್ನಾಗಿಸುವ ನೆಲೆಯಲ್ಲಿ ಚಿಂತಿಸಿ ‘ಆಳ್ವಾಸ್ ವಿರಾಸತ್ ಶಾಸ್ತ್ರೀಯ ಯುವಸಂಪದ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ದಶಂಬರ 10ರಿಂದ 15ರವರೆಗೆ 6 ದಿನಗಳ ಆಳ್ವಾಸ್ ವಿರಾಸತ್ ಸಮಯದಲ್ಲಿ ಕೊನೆಯ ದಿನವೊಂದನ್ನು ಬಿಟ್ಟು ಉಳಿದ 5 ದಿನಗಳ ಕಾಲ ಬೆಳಗ್ಗೆ 7.30ರಿಂದ ಸಂಜೆ 05.00ರವರೆಗೆ ಈ ಶಿಬಿರವು ನಡೆಯಲಿದೆ.

ಆಸಕ್ತ ಶಾಸ್ತ್ರೀಯ (ಹಿಂದೂಸ್ಥಾನಿ-ಕರ್ನಾಟಕಿ) ಸಂಗೀತ-ನೃತ್ಯ-ತಾಳವಾದ್ಯ ಮತ್ತು ಯಕ್ಷಗಾನ ಕಲೆಗಳನ್ನು ಅಭ್ಯಸಿಸುವ 6ನೇ ತರಗತಿಯಿಂದ ಸ್ನಾತಕೋತ್ತರ ತರಗತಿವರೆಗಿನ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು.

ಭಾಗವಹಿಸುವ ವಿದ್ಯಾರ್ಥಿಗಳಿಗೆ ಅಭ್ಯಸಿಸುವ ಕಲಾಪ್ರಕಾರಗಳಲ್ಲಿ ಕನಿಷ್ಠ 2 ವರ್ಷಗಳ ಪರಿಶ್ರಮವಿರಬೇಕು. ವಿದ್ಯಾರ್ಥಿಗಳಿಗೆ ತರಬೇತಿ ಶುಲ್ಕ ಇರುವುದಿಲ್ಲ. ಊಟ, ಉಪಾಹಾರ ಮತ್ತು ವಸತಿಗಳು ಉಚಿತವಾಗಿರುತ್ತವೆ. ಶಿಬಿರವು ಪ್ರತೀ ದಿನ ಯೋಗ, ಧ್ಯಾನ, ವಿದ್ವಾಂಸರಿಂದ ಉಪನ್ಯಾಸ, ಶಾಸ್ತ್ರೀಯ ಸಂಗೀತ-ನೃತ್ಯಾದಿ ಕಲೆಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಪ್ರಾತ್ಯಕ್ಷಿಕೆಗಳಿರುತ್ತವೆ. ಇದಲ್ಲದೆ ಕೃಷಿ, ಆಹಾರ, ಚಿತ್ರಕಲೆ, ಕರಕುಶಲ, ಫಲಪುಷ್ಪ ಪ್ರದರ್ಶನಗಳು ಮತ್ತು ‘ಆಳ್ವಾಸ್ ವಿರಾಸತ್-2024′ ರ ಮಹಾವೈಭವದಲ್ಲಿ ಭಾಗವಹಿಸಿ ಕಣ್ತುಂಬಿಕೊಳ್ಳುವ, ಮನತುಂಬಿಕೊಳ್ಳುವ ಅಪೂರ್ವ ಅವಕಾಶ ಶಿಬಿರಾರ್ಥಿಗಳದ್ದಾಗಲಿದೆ. ಈ ಸುವರ್ಣವಕಾಶವನ್ನು ಕಳೆದುಕೊಳ್ಳದಂತೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಅಧ್ಯಕ್ಷರಾದ ಡಾ| ಎಂ.ಮೋಹನ ಆಳ್ವ ವಿನಂತಿಸಿಕೊಂಡಿದ್ದಾರೆ.

ಆಸಕ್ತ ವಿದ್ಯಾರ್ಥಿಗಳು 09.12.2024ರ ಮೊದಲು ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಶಿಬಿರಾರ್ಥಿಗಳ ಸಂಖ್ಯೆಗೆ ಮಿತಿಯಿರುವುದರಿಂದ ಮೊದಲು ಬಂದವರಿಗೆ ಆದ್ಯತೆ. ಆಸಕ್ತ ವಿದ್ಯಾರ್ಥಿಗಳು ಈ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಚಂದ್ರಶೇಖರ ನಾವಡ -9972247873, ಸುಮನ ಪ್ರಸಾದ್ – 9448989382, ಪನ್ನಗ ಶರ್ಮನ್ – 8197240452, ಚಿನ್ಮಯ್ ಭಟ್-7760738378, ರಾಘವೇಂದ್ರ ಉಪಾಧ್ಯ – 9611388037

Related posts

ಸರಕಾರಿ ನೌಕರರ ಸಂಘಕ್ಕೆ ಆಯ್ಕೆ

Madhyama Bimba

ಪಡುಮೂಡುಕೊಣಾಜೆ ಶಾಲಾ ಹಳೆ ವಿದ್ಯಾರ್ಥಿ ಸಂಘ- ಅಧ್ಯಕ್ಷರಾಗಿ ಹರಿಶ್ಚಂದ್ರ ಕೆ.ಸಿ.

Madhyama Bimba

ಸಿ.ಎ. ಇಂಟರ್ ಮೀಡಿಯೆಟ್ ಫಲಿತಾಂಶ: ಸುಶಾಂತ್ ರಾಷ್ಟ್ರೀಯ ಮಟ್ಟದಲ್ಲಿ 36ನೇ ರ್‍ಯಾಂಕ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More