ಹೆಬ್ರಿ: ಹಳ್ಳಿಯ ಯುವಕರು ಜನರೊಂದಿಗೆ ಇದ್ದು ಹೇಗೆ ಜನಸೇವೆ ಮಾಡಲು ಸಾಧ್ಯ ಎಂಬುದನ್ನು ಮುದ್ರಾಡಿ ಮದಗ ಫ್ರೆಂಡ್ಸ್ ಮಾಡಿ ತೋರಿಸಿದೆ. ಮದಗ ಫ್ರೆಂಡ್ಸ್ ಸಮಾಜ ಸೇವೆ, ಒಗ್ಗಟ್ಟು ಎಲ್ಲರಿಗೂ ಮಾದರಿ, ಇಂತಹ ಸೇವಾ ಕಾರ್ಯ ನಿರಂತರ ಮುಂದುವರಿಯಲಿ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದರು.
ಅವರು ಹೆಬ್ರಿಯ ಮುದ್ರಾಡಿ ಮದಗ ಫ್ರೆಂಡ್ಸ್ ವತಿಯಿಂದ ಮುದ್ರಾಡಿ ಶಾಲೆಯ ಸಭಾಭವನದಲ್ಲಿ ನಡೆದ ಮದಗದೈಸಿರ ಸಾಂಸ್ಕೃತಿಕ ಹಬ್ಬ 2024ನ್ನು ಉದ್ಘಾಟಿಸಿ ಮಾತನಾಡಿದರು.
ಮದಗ ಫ್ರೆಂಡ್ಸ್ ಅಧ್ಯಕ್ಷ ಹರಿಪ್ರಸಾದ್ ಅಧ್ಯಕ್ಷ ವಹಿಸಿ ಮಾತನಾಡಿ ಸಮಾನಮನಸ್ಕರು ಯುವಕರು ಜನಸೇವೆಯ ಉದ್ದೇಶದಿಂದ ಸಂಸ್ಥೆ ಕಟ್ಟಿದ್ದೇವೆ, 8 ವರ್ಷಗಳ ವರೆಗೆ ಬೆಳೆದಿದೆ, ಸರ್ವರೂ ಸೇರಿ ಸಂಸ್ಥೆಯನ್ನು ಬೆಳೆಸಿ ಮುನ್ನಡೆಸಬೇಕು ಎಂದು ಮನವಿ ಮಾಡಿದರು.
ಶಾಲೆಯ ವಿದ್ಯಾರ್ಥಿಗಳು, ತಂಡದ ಸದಸ್ಯರು ಮತ್ತು ಇತರ ತಂಡಗಳ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು. ಸಮಾಜ ಸೇವೆ ಮಾಡಿದ ಹಿರಿಯರಾದ ಮುದ್ದು ಪೂಜಾರಿ ಸಮಗಾರಬೆಟ್ಟು, ಶಾರದಾ ಆಚಾರ್ಯ ಬಲ್ಲಾಡಿ, ಸುಂದರ ಪೂಜಾರಿ ಮತ್ತು ಲಿಂಗಪ್ಪ ಪೂಜಾರಿ ಮದಗ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಾದ ಸುದೀಪ್ ಶೆಟ್ಟಿಗಾರ್ ಉಪ್ಪಳ, ರಚಿತಾ ಕುಲಾಲ್ ಕಾಪೋಳಿ, ಅನಿಲ್ ಪೂಜಾರಿ ಜರ್ವತ್ತು, ರೇಷ್ಮಾ ಶೆಟ್ಟಿ ಮುದ್ದುಬೆಟ್ಟು ಆಶಿಶ್ ಕುಮಾರ್ ಮದಗ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮುದ್ರಾಡಿ ಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಪೂಜಾರಿ, ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ, ಮಾಜಿ ಅಧ್ಯಕ್ಷ ಮಂಜುನಾಥ ಹೆಗ್ಡೆ, ಸದಸ್ಯ ಗಣಪತಿ ಮುದ್ರಾಡಿ, ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶುಭದರ ಶೆಟ್ಟಿ, ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ, ಗ್ರಾಮ ಪಂಚಾಯಿತಿ ಸದಸ್ಯ ಸನತ್ ಕುಮಾರ್, ಮುದ್ರಾಡಿ ಮದಗ ಫ್ರೆಂಡ್ಸ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಮಾತಿಬೆಟ್ಟು ಪ್ರಕಾಶ ಪೂಜಾರಿ ಮತ್ತು ಬಲ್ಲಾಡಿ ಚಂದ್ರಶೇಖರ ಭಟ್ ನಿರೂಪಿಸಿ ಉಪನ್ಯಾಸಕಿ ರೇಷ್ಮಾ ಸ್ವಾಗತಿಸಿದರು.