ಕಾರ್ಕಳ

ಕ್ರಿಯೇಟಿವ್ ಕಾಲೇಜಿನಲ್ಲಿ ಶಿಕ್ಷಕ – ಪಾಲಕರ ಸಭೆ: ಕೌಶಲ ಸಹಿತ ಶಿಕ್ಷಣವೇ ನಮ್ಮಗುರಿ – ಡಾ. ಬಿ ಗಣನಾಥ ಶೆಟ್ಟಿ

ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಕ – ಪಾಲಕರ ಸಭೆಯು ಡಿ.21ರಂದು ಜರುಗಿತು.


ಸಭೆಯನ್ನು ಉದ್ದೇಶಿಸಿ ಸಹ ಸಂಸ್ಥಾಪಕರು ಹಾಗೂ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್‌ರವರು ವೈಯಕ್ತಿಕ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಾಧನೆ, ತರಗತಿಗಳಲ್ಲಿ ಶಿಸ್ತು ಮತ್ತು ಅವರ ಹಾಜರಾತಿ ಶೇಖಡಾವಾರು ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಸಕಾರಾತ್ಮಕ ಚಿಂತನೆ, ಪ್ರೇರಣೆ, ನಿರ್ದಿಷ್ಟ ಗುರಿ ಇತ್ಯಾದಿ ವಾಸ್ತವಾಂಶಗಳನ್ನು ಮನದಟ್ಟು ಮಾಡುವುದು ಅಗತ್ಯ ಎಂದರು.


ಸಂಸ್ಥಾಪಕರಲ್ಲಿ ಓರ್ವರಾದ ಡಾ. ಬಿ ಗಣನಾಥ ಶೆಟ್ಟಿಯವರು ನಿತ್ಯಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವ ಕೌಶಲ ಸಹಿತ ಶಿಕ್ಷಣವೇ ನಮ್ಮಗುರಿ ಎಂದರು.

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣದ ಜೊತೆಗೆ ಸಿ. ಎ, ಸಿ. ಎಸ್, ಕಂಪ್ಯೂಟರ್ ಸಂಬಂಧಿತ ವಿವಿಧ ಕಲಿಕೆಗಳ ಜೊತೆಗೆ ಎನ್‌ಎಸ್‌ಎಸ್, ಕೆಸಡೊಂಜಿ ದಿನ, ಕೈಗಾರಿಕಾ ಪ್ರದೇಶಗಳ ಭೇಟಿಯ ಜೊತೆಗೆ ಹಲವಾರು ಕಾರ್ಯಕ್ರಮಗಳ ಆಯೋಜನೆಯ ಮೂಲಕ ನೈತಿಕ ಮತ್ತು ವ್ಯಾವಹಾರಿಕ ಜ್ಞಾನವನ್ನು ನೀಡುತ್ತಿರುವ ಸಮಗ್ರ ಮಾಹಿತಿಗಳನ್ನು ಒದಗಿಸಿದರು. ಪಠ್ಯದ ಜೊತೆಗೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಪೋಷಕ ವರ್ಗದವರು, ಬೋಧಕ – ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅರ್ಥಶಾಸ್ತ್ರಉಪನ್ಯಾಸಕ ಉಮೇಶ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

ಕಾರ್ಕಳದ ರಾಜಾಪುರ ಸಾರಸ್ವತ ಸೊಸೈಟಿ ಗೆ 2024-25ನೇ ಸಾಲಿನಲ್ಲಿ ರೂ4.81ಕೋಟಿ ನಿವ್ವಳ ಲಾಭ

Madhyama Bimba

ಮೂಡಾ ಸೈಟು ಹಿಂದಿರಿಗಿಸಿರುವುದು ಭಯದ ಶರಣಾಗತಿಯಲ್ಲ: ಬಿಪಿನಚಂದ್ರ ಪಾಲ್ ನಕ್ರೆ

Madhyama Bimba

ಕೆರ್ವಾಶೆ ಗ್ರಾಮ ಪಂಚಾಯತ್ ಉಪಚುನಾವಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More