ಹೆಬ್ರಿ : ದೆಹಲಿಯಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದಲ್ಲಿ ಕೃಷಿ ಸಖಿಯಾಗಿ ಭಾಗವಹಿಸಲು ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮದ ಮುಳ್ಳುಗುಡ್ಡೆ ಬಳಿಯ ಸುಗಂಧಿ ನಾಯ್ಕ್ ಆಯ್ಕೆಯಾಗಿದ್ದಾರೆ.
ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ರಾಜ್ಯದ 12 ಮಂದಿ ಮಹಿಳೆಯರು ಆಯ್ಕೆಯಾಗಿದ್ದು ಸುಗಂಧಿ ನಾಯ್ಕ್ ಸಹಿತ 8 ಮಂದಿ ಮಂದಿ ಕೃಷಿ ಸಖಿ, ಪಶು ಸಖಿ ಹಾಹೂ ಸ್ವಸಹಾಯ ಸಂಘದ ಸದಸ್ಯರು ಮತ್ತು ಸಂಜೀವಿನಿ ಸಂಘದ 4 ಮಂದಿ ಸದಸ್ಯರು ಭಾಗವಹಿಸಲಿದ್ದಾರೆ.
ಸುಗಂಧಿ ನಾಯ್ಕ್ ಶಿವಪುರ ಗ್ರಾಮದ ಶಿವದುರ್ಗೆ ಸಂಜೀವಿನಿ ಒಕ್ಕೂಟದ ಪ್ರಮುಖರಾಗಿದ್ದು ಕೃಷಿಯಲ್ಲಿ ಸಕ್ರೀಯರಾಗಿದ್ದಾರೆ. ಅಡಿಕೆ ಹಾಳೆಯ ತಟ್ಟೆ ತಯಾರಿ ಘಟಕ ನಿರ್ಮಿಸಿ ಸ್ವಾವಲಂಬಿ ಜೀವನಕ್ಕೆ ಮಾದರಿಯಾಗಿದ್ದಾರೆ.
ಶಿವದುರ್ಗೆ ಸಂಜೀವಿನಿ ಒಕ್ಕೂಟವು 30 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದು ಉಡುಪಿ ಜಿಲ್ಲಾ ಪಂಚಾಯಿತಿ ಸಂಜೀವಿನಿ ಯೋಜನೆಯು ಸಹಕಾರ ನೀಡುತ್ತಿದೆ.