ಕುಕ್ಕುಂದೂರು ಫ್ರೆಂಡ್ಸ್ ಕುಕ್ಕುಂದೂರು ಮುಂಬೈ ಇದರ 16ನೇ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಇಂದು (ಫೆ.1ರಂದು) ಶ್ರೀದುರ್ಗಾದೇವಿ ಅನುದಾನಿತ ಹಿ.ಪ್ರಾ. ಶಾಲಾ ಬಳಿ ಸಮಾಜ ಮಂದಿರ, ಟಪ್ಪಾಲುಕಟ್ಟೆ, ಕುಕ್ಕುಂದೂರು ಇಲ್ಲಿ ನಡೆಯಲಿದೆ.
ಬೆಳಿಗ್ಗೆ ಸುನೀಲ್, ಕುಕ್ಕುಂದೂರು ಫ್ರೆಂಡ್ಸ್, ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಸಂಜೆ 6.00ರಿಂದ ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯರಿಂದ ವಿವಿಧ ವಿನೋದಾವಳಿಗಳು ಬಳಿಕ ಸಂಘದ ಸದಸ್ಯರು ಹಾಗೂ ಅತಿಥಿ ಕಲಾವಿದರಿಂದ ಪ್ರಸನ್ನ ಕುಕ್ಕುಂದೂರು ರಚಿಸಿ ನಟಿಸಿರುವ ತುಳು ಹಾಸ್ಯಮಯ ನಾಟಕ ‘ಏರಾಪೆರ್’ ಪ್ರದರ್ಶನಗೊಳ್ಳಲಿದೆ. ನಂತರ ನಮ್ಮ ಕಲಾವಿದೆರ್ ಬೆದ್ರ’ ತಂಡದಿಂದ ‘ಗೊತ್ತಿತ್ತಿನಾಯೆ ಮಿತ್ತಿತ್ತಿನಾಯೆ’ ತುಳು ಹಾಸ್ಯಮಯ ನಾಟಕ ನಡೆಯಲಿದೆ.