ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೊ ಉಷಾ ನಾಯಕ್ ರವರ ನಿವೃತ್ತಿಯ ಪ್ರಯುಕ್ತ ಕಾಲೇಜಿನಲ್ಲಿ ಅಭಿನಂದನೆ ಮತ್ತು ಬೀಳ್ಕೊಡುವ ಸಮಾರಂಭ ಜರುಗಿತು.
ಸುಮಾರು 37 ವರ್ಷಗಳಿಂದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಸಮಾರಂಭದಲ್ಲಿ ವಿದ್ಯಾರ್ಥಿನಿಯರಿಗೆ ಮತ್ತು ಕಾಲೇಜಿಗೆ ಶುಭವನ್ನು ಹಾರೈಸಿ ಆಡಳಿತ ಮಂಡಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ದೇವಳದ ಒಂದನೇ ಮೊಕ್ತೇಸರರಾದ ಕೆ. ಜಯರಾಮ್ ಪ್ರಭುರವರು ವಹಿಸಿದ್ದರು.
ಮುಖ್ಯ ಅತಿಥಿಗಳಾದ ಎಸ್.ವಿ.ಟಿ ಗರ್ಲ್ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಶ್ಯಾಮಲ ಕುಮಾರಿ ಬೇವಿಂಜೆ ಮಾತನಾಡಿ ಉಷಾ ನಾಯಕ್ ರವರ ವಿದ್ಯಾರ್ಥಿ ಜೀವನ ಮತ್ತು ಅಧ್ಯಾಪನಾ ಜೀವನದ ಬಗ್ಗೆ ತಮ್ಮ ಅನುಭವವನ್ನು ವಿವರಿಸಿದರು.
ವೆಂಕಟರಮಣ ದೇವಳದ ಮೊಕ್ತೇಸರರು ಹಾಗೂ ಎಸ್.ವಿ ಎಜ್ಯುಕೇಷನ್ ಟ್ರಸ್ಟ್‌ನ ಅಧ್ಯಕ್ಷರಾದ ಮೋಹನ್ ದಾಸ್ ಶೆಣೈ, ಕಾರ್ಯದರ್ಶಿಯವರಾದ ಕೆ.ಪಿ ಶೆಣೈ ಹಾಗೂ ಕೋಶಾಧ್ಯಕ್ಷರಾದ ಐ.ರವೀಂದ್ರನಾಥ್ ಪೈ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಸೀತಾರಾಮ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಬಿ. ರಾಜಗೋಪಾಲ ಶೆಣೈ, ಎಸ್.ವಿ ಎಜ್ಯುಕೇಷನ್ ಟ್ರಸ್ಟ್‌ನ ಸದಸ್ಯರಾದ ವೈ ಆರ್ ನರಸಿಂಹ ಶೆಣೈ ಹಾಗೂ ಎಸ್. ವಿ. ಟಿ ಸಮೂಹ ಸಂಸ್ಥೆಗಳ ಮುಖ್ಯಸ್ಥರು, ಬೋಧಕ ಬೋಧಕೇತರರು, ವಿದ್ಯಾರ್ಥಿನಿಯರು ಮತ್ತು ಪೂರ್ವ ವಿದ್ಯಾರ್ಥಿನಿಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಗೀತಾ ಜಿ ಸ್ವಾಗತಿಸಿದರು. ಉಪನ್ಯಾಸಕ ಸೂರಜ್ ಕಾರ್ಯಕ್ರಮ ನಿರೂಪಿಸಿ. ಉಪನ್ಯಾಸಕಿ ವಿನುತ ಕಾಮತ್ ವಂದಿಸಿದರು.