ಕಾರ್ಕಳ

ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಸಂವಿಧಾನ ಬದ್ಧವಾಗಿರಬೇಕೇ ವಿನಃ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರುಗಳುಗೆ ಗಂಜಿ ಕೇಂದ್ರವಾಗಬಾರದು?: ರವೀಂದ್ರ ಮೊಯ್ಲಿ

ಪಂಚ ಗ್ಯಾರಂಟಿಗಳ ಘೋಷಣೆಯೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ರಾಜ್ಯ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಎಡವಿರುವುದು ಮಾತ್ರವಲ್ಲದೇ ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಕುಂಠಿತವಾಗಿರುವುದು ಈಗಾಗಲೇ ಜಗತ್‌ಜಾಹಿರವಾಗಿದ್ದು, ಭಾರತೀಯ ಜನತಾ ಪಾರ್ಟಿಯು ಪಂಚ ಗ್ಯಾರಂಟಿಗಳ ಅನುಷ್ಠಾನದಲ್ಲಿ ಆಗಬಹುದಾದ ಬಾಧಕಗಳ ಬಗ್ಗೆ ವಿರೋಧ ವ್ಯಕ್ತಪಡಿಸಿತ್ತೇ ವಿನಃ ಪಂಚಗ್ಯಾರಂಟಿಗಳನ್ನು ವಿರೋಧಿಸಿಲ್ಲ.

ಇದೀಗ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನದಲ್ಲಿ ಎಡವಿದ್ದು, ಸಂಪನ್ಮೂಲ ಹೊಂದಿಸಲು ಒದ್ದಾಡುತ್ತಿದ್ದರೂ ಅದಕ್ಕೊಂದು ಅನುಷ್ಠಾನ ಸಮಿತಿ ರಚಿಸಿ ಅದಕ್ಕೆತನ್ನ ಕಾರ್ಯಕರ್ತಗಳನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ನೇಮಿಸಿ ಅವರಿಗೆ ವೇತನ ನಿಗಧಿ ಪಡಿಸಿ ಜನರ ತೆರಿಗೆಯ ಹಣ ಕಾಂಗ್ರೇಸ್ ಕಾರ್ಯಕರ್ತರ ಜೇಬಿನ ಪಾಲಾಗುತಿದ್ದು, ಈ ರೀತಿ ತೆರಿಗೆಯ ಹಣಪೋಲಾಗುತ್ತಿರುವುದನ್ನು ವಿಧಾನಸಭೆಯಲ್ಲಿ ಶಾಸನಬದ್ಧವಾಗಿ ಪ್ರಶ್ನಿಸಲಾಗಿತ್ತು ಮತ್ತು ಇದು ಒಬ್ಬ ಜವಬ್ದಾರಿಯುತ ಶಾಸಕನ ಕರ್ತವ್ಯ ಕೂಡ ಆಗಿದೆ.

ಅಂಬೇಡ್ಕರ್ ರಚಿತ ಭಾರತದ ಸಂವಿಧಾನದ ಪ್ರಕಾರ ನಿಯಮಗಳ ಆಯ್ಕೆಗೊಂಡ ಶಾಸಕರ ಸ್ಥಾನಮಾನಗಳ ಬಗ್ಗೆ ಮಾನದಂಡ ಹಾಗೂ ಅವರಿಗಿರುವ ಅಧಿಕಾರಗಳ ಬಗ್ಗೆ ತಿಳಿ ಹೇಳಿದ್ದು, ಅದಕ್ಕೆ ಚ್ಯುತಿ ಬಂದಾಗ ಶಾಸನ ಸಭೆಯಲ್ಲಿ ಪ್ರಶ್ನಿಸುವುದು ಶಾಸಕನ ಹಕ್ಕು ಮತ್ತು ಕರ್ತವ್ಯ.

ಕಾರ್ಕಳ ತಾಲೂಕಿನ ಕಾಂಗ್ರೇಸ್‌ನ ನಾಯಕರೆನೆಸಿಕೊಂಡವರು ಉಡುಪಿ ಜಿಲ್ಲಾ ಅನುಷ್ಠಾನ ಸಮಿತಿಯಲ್ಲೂ ಉಪಾಧ್ಯಕ್ಷರಾಗಿದ್ದುಕೊಂಡು ವೇತನ ಪಡೆಯುವುದು ಎಷ್ಟರ ಮಟ್ಟಿಗೆ ಸರಿ? ಈ ಬಗ್ಗೆ ಕಾಂಗ್ರೇಸ್ ನಾಯಕರುಆತ್ಮ ವಿಮರ್ಶೆ ಮಾಡಿಕೊಳ್ಳಲಿ.


ಕಾಂಗ್ರೇಸ್ ನಾಯಕರುಗಳು ಪುತ್ತೂರು ತಾಲೂಕಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಬಗ್ಗೆ ಬಜೆಟ್ ನಲ್ಲಿಘೋಷಣೆಯಾದಾಗ ಪುತ್ತೂರು ಶಾಸಕನ ಅಭಿನಂದಿಸುವ ಭರದಲ್ಲಿ ಈ ಬೇಡಿಕೆ ಸುಮಾರು ಒಂದುವರೆ ದಶಕಗಳ ಹಿಂದಿನದ್ದು, ಇದಕ್ಕೆ ಈ ಹಿಂದಿನ ಶಾಸಕರುಗಳ ಪ್ರಯತ್ನ ಕೂಡಇದೆ ಎನ್ನುವುದನ್ನು ಮರೆತು ಬಾಯಿ ಚಪಲಕ್ಕಾಗಿ ಕಾರ್ಕಳ ಶಾಸಕರ ಬಗ್ಗೆ ಆಡಿರುವ ಮಾತುಗಳು ಖಂಡನೀಯ.

ಕಾರ್ಕಳದಲ್ಲಿ ನಾಲ್ಕು ಬಾರಿ ಶಾಸಕ ಮತ್ತುಎರಡು ಖಾತೆಗಳ ಮಂತ್ರಿಯಾಗಿಅದನ್ನು ಯಶಸ್ವಿಯಾಗಿ ನಿಭಾಯಿಸಿದ ಸುನಿಲ್ ಕುಮಾರ್‌ರವರಿಗೆ ಅಭಿವೃದ್ಧಿಯ ವಿಷಯದಲ್ಲಿ ಕಾಂಗ್ರೇಸ್ ನಾಯಕರುಗಳಿಂದ ಪಾಠಕಲಿಯುವ ಅಗತ್ಯವಿಲ್ಲ. ಕಾರ್ಕಳದಲ್ಲಿ ಈಗಾಗಲೇ ಆರಂಭವಾಗಿರುವ ಐಟಿಐ,ಕಾಲೇಜು, ಮಹಿಳಾ ಪಾಲಿಟೆಕ್ನಿಕ್ ಕಾಲೇಜು, ಮಹಿಳಾ ನರ್ಸಿಂಗ್ ಕಾಲೇಜು ಯಾರ ಕಾಲದಲ್ಲಿ ಆಗಿರುತ್ತದೆ ಎನ್ನುವುದನ್ನು ಕಾಂಗ್ರೇಸ್ ನಾಯಕರು ತಿಳಿದುಕೊಳ್ಳುವುದು ಒಳಿತು.

ಸುನಿಲ್ ಕುಮಾರ್‌ರವರು ಶಾಸನ ಸಭೆಯಲ್ಲಿ ಒಬ್ಬ ಶಾಸನಬದ್ಧವಾಗಿ ಇರುವ ಹಕ್ಕು ಮತ್ತು ಅಧಿಕಾರಗಳ ಬಗ್ಗೆ ಮಾತನಾಡಿದರೇ ಹೊರತು ನಿಮ್ಮರೀತಿಗಂಜಿ ಕೇಂದ್ರಗಳಿಗೆ ಎಡಕಾಡಲಿಲ್ಲ. ಬರೀ ವಿರೋಧ ಮಾಡಲಿಕ್ಕಾಗಿಯೇ ವಿರೋಧ ಮಾಡುತ್ತಿರುವ ಮನಸ್ಥಿತಿಯಿಂದ ಹೊರಬಂದು ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೇಸ್ ನಾಯಕರುಗಳು ಕೈಜೋಡಿಸಲಿ, ಇಲ್ಲದ್ದಿದರೆ ಜನತೆಯೇ ನಿಮಗೆ ತಕ್ಕ ಪಾಠಕಲಿಸುವ ದಿನ ದೂರವಿಲ್ಲ ಎಂದು ಕಾರ್ಕಳ ಭಾರತೀಯ ಜನತಾ ಪಾರ್ಟಿ ವಕ್ತಾರರಾದ ರವೀಂದ್ರ ಮೊಯ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ನಿಟ್ಟೆ ಬಳಿ ಕಾರು ಹಿಂದಿನಿಂದ ಸ್ಕೂಟರ್‌ಗೆ ಡಿಕ್ಕಿ: ಗಾಯ

Madhyama Bimba

ಅಪ್ರೆಂಟಿಸ್ ತರಬೇತಿ: ಪತ್ರಿಕೋದ್ಯಮ ಪದವೀಧರರಿಂದ ಅರ್ಜಿ ಆಹ್ವಾನ

Madhyama Bimba

ಕಾರ್ಕಳ ತಾಲೂಕಿನಲ್ಲಿ ಸುರಿದ ಗಾಳಿ ಮಳೆಗೆ ವಿವಿಧೆಡೆ ಅಪಾರ ಹಾನಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More