ಕಬ್ಬಿನಾಲೆ ಗ್ರಾಮದ ಅರಣ್ಯ ಬುಡಕಟ್ಟು ಪರಿಶಿಷ್ಠ ಪಂಗಡದ ಮಲೆ ಕುಡಿಯ ಕಾಲೋನಿಯನ್ನು ಸಂಪರ್ಕಿಸುವ ಸೇತುವೆ ಹಾಗೂ ರಸ್ತೆ ಅಭಿವೃದ್ದಿ ಕಾಮಗಾರಿಗೆ ರೂ 2 ಕೋಟಿ ಅನುದಾನ ಮಂಜೂರುಗೊಂಡಿದೆ ಎಂದು ಶಾಸಕ ಸುನಿಲ್ ಕುಮಾರ್ ಮಾಧ್ಯಮ ಬಿಂಬಕ್ಕೆ ತಿಳಿಸಿದ್ದಾರೆ.
ಮತ್ತಾವು ಪ್ರದೇಶ ಪ್ರತೀ ಬಾರಿಯ ಮಳೆಗಾಲದ ಸಂದರ್ಭದಲ್ಲಿ ಜನರಿಗೆ ಬಹಳ ಆತಂಕವನ್ನು ತರುತ್ತಿತ್ತು. ಈ ಪರಿಸರದ ಜನರು ಹಲವಾರು ವರ್ಷಗಳಿಂದ ತಮ್ಮ ಬೇಡಿಕೆಯನ್ನು ಜನ ಪ್ರತಿನಿಧಿಗಳಿಗೆ ತಿಳಿಸುತ್ತಾ ಬಂದಿದ್ದರು.
ಈ ಪರಿಸರದಲ್ಲಿ ಹಲವಾರು ಮಲೆ ಕುಡಿಯರ ಮನೆಗಳಿದ್ದು ಅವರೆಲ್ಲರು ಕೂಡಾ ಈ ಸಮಸ್ಯೆಯಿಂದಾಗಿ ತೊಂದರೆ ಅನುಭವಿಸುತ್ತಲೇ ಬಂದಿದ್ದರು. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯನ್ನು ಮೇಲಿನ ಕಾಲು ಸಂಕದ ಮೂಲಕ ನಡೆದು ಕೊಂಡು ಹೋಗುವುದು ತೀರಾ ಅಪಾಯಕಾರಿ ಆಗಿತ್ತು. ಹಲವಾರು ವರ್ಷಗಳ ಬೇಡಿಕೆಯ ನಂತರ ಈ ಬಾರಿ ಈ ಸೇತುವೆ ಹಾಗೂ ರಸ್ತೆಗೆ ಅನುದಾನ ಮಂಜೂರುಗೊಂಡು ಜನ ಸಂತಸ ಪಡುವಂತಾಗಿದೆ.