Blog

ಮತ್ತಾವು ಪ್ರದೇಶಕ್ಕೆ ಮುನಿಯಾಲು ಉದಯ ಶೆಟ್ಟಿ ಭೇಟಿ

ಕಬ್ಬಿನಾಲೆಯ ಮತ್ತಾವು ಪ್ರದೇಶದ ನಿವಾಸಿಗಳನ್ನು ಕಾಂಗ್ರೇಸ್ ನಾಯಕರಾದ ಮುನಿಯಾಲು ಉದಯ ಶೆಟ್ಟಿ ಭೇಟಿ ಮಾಡಿ ಅಲ್ಲಿ ಸೇತುವೆ ಹಾಗು ರಸ್ತೆ ನಿರ್ಮಾಣಕ್ಕಾಗಿ ಸರಕಾರ ರೂ 2 ಕೋಟಿ ಅನುದಾನ ನೀಡಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿ ಸಮಸ್ಯೆ ಪರಿಹಾರಕ್ಕಾಗಿ ನಿರಂತರ ಶ್ರಮಿಸುವುದಾಗಿ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ 20 ವರ್ಷಗಳಿಂದ ಇಲ್ಲಿನ ಸೇತುವೆ ಸಮಸ್ಯೆ ಪರಿಹಾರ ಕಾಣಲಿಲ್ಲ. ಈ ಪರಿಸ್ಥಿತಿಯನ್ನು ಅವಲೋಕಿಸಿ ಫೆಬ್ರವರಿ 17ರಂದು  ಸಚಿವ ಸತೀಶ್ ಜಾರಕಿ ಹೊಳಿಯವರು ಉಡುಪಿಗೆ ಆಗಮಿಸಿದಾಗ ಅವರಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಮನವಿ ಮಾಡಿದ್ದೆ. ಈ ಬಗ್ಗೆ ವಿಚಾರ ತಿಳಿದ ಸಚಿವರು ಅರಣ್ಯ ಇಲಾಖೆಯವರ ಜೊತೆಗೆ ಸಭೆ ನಡೆಸಿ ಅರಣ್ಯ ಇಲಾಖೆಯ ಸಮಸ್ಯೆ ಇತ್ಯರ್ಥಗೊಳಿಸಿ ಜಿಲ್ಲಾಧಿಕಾರಿಗೆ ತಿಳಿಸಿದ್ದರು.


ಅಲ್ಲಿಂದ ಸಚಿವರು ಬೆಂಗಳೂರಿಗೆ ತೆರಳಿದ ಬಳಿಕ ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಹಣ ಮಂಜೂರು ಮಾಡುವಲ್ಲಿ ಪ್ರಯತ್ನ ಪಟ್ಟಿದ್ದಾರೆ.
ಗ್ರಾಮೀಣ ಜನರ ಸಮಸ್ಯೆ ಪರಿಹಾರ ಮಾಡಲು ತಕ್ಷಣ ಸ್ಪಂದನೆ ಮಾಡಿ ಕಳೆದ 20ವರ್ಷಗಳ ಸಮಸ್ಯೆ ಪರಿಹಾರ ಮಾಡಿದ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.


ಈ ಸಮಸ್ಯೆ ಪರಿಹಾರ ಮಾಡಲು ಮಲೆ ಕುಡಿಯ ಸಮುದಾಯ ಕೂಡಾ ನಿರಂತೆ ಹೋರಾಟ ಮಾಡಿದೆ. ಮಲೆ ಕುಡಿಯರ ಸಮಸ್ಯರ ಈ ಬಾರಿ ಪರಿಹಾರ ಕಂಡಿರುವುದು ತನಗೆ ಕೂಡಾ ಬಹಳ ಸಂತಸ ತಂದಿದೆ ಎಂದು ಅವರು ತಿಳಿಸಿದ್ದಾರೆ.


ಕಾರ್ಕಳ ಕ್ಷೇತ್ರದಲ್ಲಿ ಇನ್ನು ಕೂಡಾ ಪರಿಹಾರ ಕಾಣದ ಹಲವಾರು ಸಮಸ್ಯೆಗಳಿದ್ದು ಅದನ್ನು ಕೂಡಾ ಹಂತ ಹಂತವಾಗಿ ಸರಕಾರ ಪರಿಹಾರ ಮಾಡುತ್ತದೆ. ಸಚಿವರಿಗೆ ಇನ್ನೂ ಹಲವಾರು ಕಾಮಗಾರಿಗಳ ಪಟ್ಟಿಯನ್ನು ಸಲ್ಲಿಸಿದ್ದು ಮುಂದಿನ ದಿನಗಳಲ್ಲಿ ಅದು ಕೂಡಾ ಪರಿಹಾರ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಗೋಪಿನಾಥ್ ಭಟ್, ಚಂದ್ರ ಶೇಖರ ಬಾಯರಿ ಮತ್ತಿತರರು ಉಪಸ್ಥಿತರಿದ್ದರು.

Related posts

ಕಾರ್ಕಳ ಅತ್ತೂರು ಪರ್ಪಲೆ ಗಿರಿ ದೈವಸ್ಥಾನ

Madhyama Bimba

ನಾಳೆ ಉಡುಪಿಗೆ ರಜೆ

Madhyama Bimba

ಪಳ್ಳಿ ಬಳಿ ಪಾದಾಚಾರಿ ಮೇಲೆ ಬೈಕ್ ಡಿಕ್ಕಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More