ಕಾರ್ಕಳದಲ್ಲಿ ಏಪ್ರಿಲ್ 19ರಿಂದ 27ರ ವರೆಗೆ ಸಮ್ಮರ್ ಫೆಸ್ಟಿವಲ್ ಎಂಬ ವಿಶೇಷ ಕಾರ್ಯಕ್ರಮವು ನಡೆಯಲಿದೆ.
ಕಾರ್ಕಳದ ಬಾಯ್ ಜೋನ್ ಅಕಾಡೆಮಿ ಹಾಗು ಕದ್ರಿ ಇವೆಂಟ್ಸ್ ಬಳಗವು ಈ ವಿಶೇಷ ಕಾರ್ಯಕ್ರಮವನ್ನು ಕಾರ್ಕಳದಲ್ಲಿ ಹಮ್ಮಿ ಕೊಂಡಿರುವುದಾಗಿ ತಿಳಿದು ಬಂದಿದೆ.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಆಹಾರ ಮೇಳ, ಅಮ್ಯೂಸ್ ಮೆಂಟ್ ಪಾರ್ಕ್, ನೃತ್ಯ ವೈವಿಧ್ಯಗಳು ಕಾರ್ಕಳದ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ.
9 ದಿನಗಳಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಹಾಗು ಕನ್ನಡ ಚಲನ ಚಿತ್ರ ರಂಗದ ಹಲವಾರು ನಟರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಾಯ್ ಜೋನ್ ಅಕಾಡೆಮಿ ಅಧ್ಯಕ್ಷರಾದ ಕಿಶೋರ್ ತಿಳಿಸಿದ್ದಾರೆ.
ಮಕ್ಕಳಿಗೆ ಏಪ್ರಿಲ್ ತಿಂಗಳಿನಿಂದ ಶಾಲೆಗೆ ರಜೆ ಸಿಕ್ಕಿದೆ. ರಜೆಯ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಎಲ್ಲರಲ್ಲೂ ಹುರುಪನ್ನು ತರಲಿದೆ.
previous post