ಕಾರ್ಕಳದಿಂದ ಮೂಡಬಿದ್ರಿ ಗೆ ಹೋಗುತ್ತಿದ್ದ ನಿಶ್ಮಿತಾ ಬಸ್ ಗೆ ಲಾರಿಯೊಂದು ಗುದ್ದಿದ ಘಟನೆ ವರದಿಯಾಗಿದೆ.
ಇಂದು ಬೆಳಿಗ್ಗೆ ಕಾರ್ಕಳದಿಂದ ಮೂಡಬಿದ್ರಿ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಗೆ ಮೂಡಬಿದ್ರಿ ಕಡೆಯಿಂದ ಬರುತ್ತಿದ್ದ ಲಾರಿ ನೇರವಾಗಿ ಮುಖಾ ಮುಖಿಯಾಗಿದೆ.
ಅಪಘಾತ ಆಗುವ ಮುನ್ಸೂಚನೆ ತಿಳಿದ ಖಾಸಗಿ ಬಸ್ ಚಾಲಕ ತಕ್ಷಣ ಬಸ್ ನ್ನು ಎಡ ಭಾಗಕ್ಕೆ ತಿರುಗಿಸಿದಾಗ ಲಾರಿ ಬಸ್ ನ ಬಲ ಭಾಗಕ್ಕೆ ಉಜ್ಜಿ ಕೊಂಡು ಹೋಗಿ ರಸ್ತೆಯಿಂದ ಮಣ್ಣಿನ ಮಾರ್ಗದತ್ತ ಚಲಿಸಿದೆ.
ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅಪಘಾತ ಆಗುವುದು ತಪ್ಪಿದೆ.
ಬಳಿಕ ಖಾಸಗಿ ಬಸ್ನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ ಮೂಲಕ ಕಳುಹಿಸಲಾಯಿತು.