ಕಾರ್ಕಳ ತಾಲೂಕಿನ ನೀರೆ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಇಂದು (ಏ. 12) ಸುಗ್ಗಿ ಹುಣ್ಣಿಮೆಯಂದು ಬೈದರ್ಕಳ ನೇಮೋತ್ಸವ, ಗ್ರಾಮದ ಸಾಧಕರಿಗೆ ಸನ್ಮಾನ ಮತ್ತು ಜೋಗಿಪುರುಷ ಕೋಲ ನಡೆಯಲಿದೆ.
ಏ.13ರಂದು ಸಂಜೆ ಗಂಟೆ 2.00ರಿಂದ : ಮಾಯಂದಾಳ ನೇಮ, ಅಣ್ಣಪ್ಪ ಪಂಜುರ್ಲಿ ಧೂಮಾವತಿ, ಹುಲಿ ಚಾಮುಂಡಿ ಕೋಲ ನಂತರ ಧ್ವಜ ಇಳಿಸಿ ರಾತ್ರಿ ಗಂಟೆ 7.00ಕ್ಕೆ ಭಂಡಾರ ನೀರೆ ಪೆರಿಮಾರುಗುತ್ತು ಮನೆಗೆ ಹಿಂತಿರುಗುವುದು. ಸಂಜೆ 6.00ರಿಂದ 7.00ರವರೆಗೆ ಪಟ್ಲ ಸತೀಶ್ ಕುಮಾರ್ ಶೆಟ್ಟಿಯವರ ತಂಡದಿಂದ ಯಕ್ಷ-ಗಾನ-ವೈಭವ ರಾತ್ರಿ 8.00ರಿಂದ 1.00ರವರೆಗೆ : ಸಾಲಿಗ್ರಾಮ ಯಕ್ಷಗಾನ ಮಂಡಳಿ ಇವರಿಂದ ಕಾಲಮಿತಿ ಯಕ್ಷಗಾನ ಭೀಷ್ಮವಿಜಯ ಮತ್ತು ಕವಿರತ್ನ ಕಾಳಿದಾಸ ಪ್ರದರ್ಶನಗೊಳ್ಳಲಿದೆ.