ಹೆಬ್ರಿ ಎಸ್.ಕೆ. ಎಂಟರ್ ಪ್ರೈಸಸ್ ಸಂಸ್ಥೆಯಲ್ಲಿ ಶಾರ್ಟ್ ಸರ್ಕೂಟ್ : ಬೆಂಕಿ ತಗುಲಿ ಸುಟ್ಟು ಕರಕಲಾದ ವಸ್ತುಗಳು – 15 ಲಕ್ಷ ನಷ್ಟ.
ಹೆಬ್ರಿ : ಹೆಬ್ರಿಯ ಎಸ್. ಕೆ. ಫರ್ನಿಚರ್ ಉದ್ಯಮ ಸಮೂಹದ ಅಂಗ ಸಂಸ್ಥೆ ಹೆಬ್ರಿ ಕುಚ್ಚೂರು ರಸ್ತೆಯಲ್ಲಿರುವ ಎಸ್.ಕೆ. ಎಂಟರ್ ಪ್ರೈಸಸ್ ಸಂಸ್ಥೆಯಲ್ಲಿ ಶಾರ್ಟ್ ಸರ್ಕೂಟ್ ನಿಂದ ಶನಿವಾರ ಬೆಂಕಿ ತಗುಲಿ ಸುಮಾರು 15 ಲಕ್ಷ ನಷ್ಟವಾಗಿದೆ. ಪೈಪ್, ಕಮಾಡೋ, ಕಟ್ಟಡ ಸಾಮಾಗ್ರಿಗಳು, ಫಿಟ್ಟಿಂಗ್ಸ್ ವಸ್ತುಗಳು, ಗ್ರಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ತಗುಲಿ ಸುಮಾರು 15 ಲಕ್ಷ ನಷ್ಟವಾಗಿದೆ. ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ. ಹೆಬ್ರಿ ಸಬ್ ಇನ್ಸ್ ಫೆಕ್ಟರ್ ಮಹೇಶ್ ಟಿ.ಎಂ. ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.



