ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಡಾ|| ಬಿ.ಆರ್ ಅಂಬೇಡ್ಕರ್‌ರವರ ಜಯಂತಿಯನ್ನು ಬಹಳ ಸಡಗರದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಮ್ಮ ಸಂಸ್ಥೆಯ ಕಾಲೇಜು ವಿಭಾಗದ ಪ್ರಾಂಶುಪಾಲರಾದ ಲಕ್ಷ್ಮೀನಾರಾಯಣ ಕಾಮತ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ರುಡಾಲ್ಫ್ ಕಿಶೋರ್ ಲೋಬೋ ಹಾಗೂ ಪ್ರೌಢಶಾಲಾ ಶಿಕ್ಷಕಿ ಶ್ರೀಮತಿ ಜೋಸ್ನಾ ಲತಾ ಉಪಸ್ಥಿತರಿದ್ದರು.
ರುಡಾಲ್ಫ್ ಕಿಶೋರ್ ಲೋಬೋರವರು ಅಂಬೇಡ್ಕರ್ ಜಯಂತಿಯ ಮಹತ್ವವನ್ನು ತಿಳಿಸುತ್ತಾ ಯಾವುದೇ ಒಂದು ಕಟ್ಟಡದ ನಿರ್ಮಾಣಕ್ಕೆ ಅಡಿಪಾಯ ಎಷ್ಟು ಮುಖ್ಯವೋ ಅದೇ ರೀತಿ ನಮ್ಮ ಜೀವನಕ್ಕೆ ಸಂವಿಧಾನದ ಮೌಲ್ಯಗಳು ಅಷ್ಟೇ ಮುಖ್ಯ ಎಂದು ತಿಳಿಸಿದರು. ಶಿಕ್ಷಕಿಯಾದ ಶ್ರೀಮತಿ ರಮಿತಾ ಶೆಟ್ಟಿಯವರು ಸಂವಿಧಾನದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸಮೀಕ್ಷಾ ಜೋಗಿ, ಸ್ವಾಗತವನ್ನು ಶೃತಿ ಶೆಟ್ಟಿ ಮತ್ತು ಧನ್ಯವಾದವನ್ನು ಶ್ರೀಮತಿ ಉಮಾದೇವಿ ನೆರವೇರಿಸಿದರು.