ಹೆಬ್ರಿ: ಹೆಬ್ರಿ ಗ್ರಾಮದ ಅನೂಪ (35) ರವರು ಚಿಕಿತ್ಸೆಗೆ ಸ್ಪಂದಿಸದೆ ಏ. 17ರಂದು ಮೃತಪಟ್ಟಿದ್ದಾರೆ.
ಇವರು ಮನೆಮನೆಗೆ ಗ್ಯಾಸ ವಿತರಣೆ ಕೆಲಸ ಮಾಡಿಕೊಂಡಿದ್ದು, ತನ್ನ ಮನೆ ಕೆರೆಬೆಟ್ಟು ಗ್ರಾಮದ ಮಂಡಾಡಿಜೆಡ್ಡಿನಲ್ಲಿ ಅಡುಗೆ ಮಾಡಲು ಹೋಗಿ ಸ್ಟೌ ಹಚ್ಚಿದಾಗ ಒತ್ತಡದಿಂದ ಅಥವಾ ಲೀಕೆಜ್ ನಿಂದ ಒಮ್ಮಲೇ ಬೆಂಕಿ ಬಂದು ಅನೂಪ ರವರ ಮೈಗೆ ಬೆಂಕಿ ತಗುಲಿ ಭಾಗಶಃ ದೇಹ ಸುಟ್ಟಿರುತ್ತದೆ.
ಈ ಬಗ್ಗೆ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.