ಕಾರ್ಕಳ

ಕ್ರೈಸ್ಟ್‌ಕಿಂಗ್: ರೋವರ್ಸ್ ಮತ್ತು ರೇಂಜರ್ಸ್ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ

ಕಾರ್ಕಳ: ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಕಾರ್ಕಳ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಕಳ ಪೇಟೆಯ ವಿವಿಧ ಕಡೆಗಳಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ನಡೆಯಿತು.


ಕಾರ್ಕಳದ ಅನಂತಶಯನ, ಆನೆಕೆರೆ, ಬಂಡೀಮಠ, ಸರ್ವಜ್ಞ ವೃತ್ತ, ಬೈಪಾಸ್ ನವೋದಯ ಸರ್ಕಲ್‌ಗಳಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಮತ್ತು ಚತುಶ್ಚಕ್ರ ವಾಹನ ಸವಾರರಿಗೆ ಸೀಟ್ ಬೆಲ್ಟ್ ಧರಿಸುವಂತೆ ಜಾಗೃತಿ ಮೂಡಿಸಲಾಯಿತು.


ಹೆಲ್ಮೆಟ್ ಧರಿಸದವರಿಗೆ ಹಾಗೂ ಸೀಟ್ ಬೆಲ್ಟ್ ಧರಿಸದವರಿಗೆ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸದಸ್ಯರು ಗುಲಾಬಿ ಹೂವನ್ನು ನೀಡಿ ವಾಹನ ಚಾಲನಾ ನಿಯಮಗಳನ್ನು ಪಾಲಿಸುವಂತೆ ವಿನಂತಿಸಿದರು.


ಕಾರ್ಕಳ ನಗರ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಜಯಂತ್ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ಸಹಕರಿಸಿದರು.

ಜಿಲ್ಲಾ ಗೈಡ್ಸ್ ಆಯುಕ್ತರಾದ ಜ್ಯೋತಿ ಪೈ, ಕಾರ್ಕಳ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ಉಪಾಧ್ಯಕ್ಷರಾದ ಜಗದೀಶ್ ಹೆಗ್ಡೆ ಹಾಗೂ ಸಾವಿತ್ರಿ ಮನೋಹರ್, ಕ್ರೈಸ್ಟ್‌ಕಿಂಗ್ ರೋವರ್ ಲೀಡರ್ ಉಪನ್ಯಾಸಕ ದೀಪಕ್, ರೇಂಜರ್ ಲೀಡರ್ ಉಪನ್ಯಾಸಕಿ ಕು. ಅಭಿನಯ, ಸ್ಕೌಟ್ ಶಿಕ್ಷಕರಾದ ಕೃಷ್ಣ ಪ್ರಸಾದ್, ಪ್ರಕಾಶ್, ಸ್ಕೌಟ್ಸ್ ಶಿಕ್ಷಕಿ ಆಶಾ ಜ್ಯೋತಿ ಹಾಗೂ ಸಂಸ್ಥೆಯ ಉಪನ್ಯಾಸಕರು ನೇತೃತ್ವ ವಹಿಸಿದ್ದರು.

Related posts

ಮುನಿಯಾಲು ಕಾಲೇಜಿನಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ

Madhyama Bimba

ಪೈಶಾಚಿಕ‌ ಕ್ರಮ ಎಲ್ಲರಿಗೂ ಎಚ್ಚರಿಕೆಯ ಗಂಟೆ: ಸುನೀಲ್ ಕುಮಾರ್

Madhyama Bimba

ಮುದ್ರಾಡಿ: ಮದಗ ಫ್ರೆಂಡ್ಸ್ – ಮದಗದೈಸಿರ ಸಾಂಸ್ಕೃತಿಕ ಹಬ್ಬ 2024

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More