ಮೂಡುಬಿದಿರೆ

ಡಿಜೆಯಲ್ಲಿ ರೊಬೋಟಿಕ್ ಲ್ಯಾಬ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಲ್ಯಾಬ್ ಉದ್ಘಾಟನೆ

ವಿದ್ಯಾರ್ಥಿಗಳನ್ನು ಭವಿಷ್ಯದ ಅಗತ್ಯಗಳಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ರೋಬೋಟಿಕ್ ಲ್ಯಾಬ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಲ್ಯಾಬ್ ನ್ನು ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅನಾವರಣಗೊಳಿಸಲಾಯಿತು . ಇದರೊಂದಿಗೆ ಸಂತಸದ ಚಟುವಟಿಕೆ ಆಧಾರಿತ ಕಲಿಕೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಪೂರ್ವ ಪ್ರಾಥಮಿಕ ಮತ್ತು ಸಣ್ಣ ಮಕ್ಕಳಿಗೆ ನೂತನ ಕ್ರೀಡೋಲ್ಯಾಬ್ ನ ಉದ್ಘಾಟನೆಯನ್ನು ದಿಗಂಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಎಂ. ವೀರೇಂದ್ರ ಇವರು ನೆರವೇರಿಸಿದರು.


ನಮ್ಮ ವಿದ್ಯಾರ್ಥಿಗಳು ಈ ಉಪಕ್ರಮದ ಮೂಲಕ ನವೀನತೆ , ವಿಮಾರ್ಶಾತ್ಮಕ ಹಾಗೂ ಪ್ರಾಯೋಗಿಕ ಆಧಾರಿತ ಕಲಿಕೆಯ ಅನುಭವವನ್ನು ಪಡೆಯಲಿದ್ದು, ನಾಳೆಯ ಸವಾಲುಗಳು ಮತ್ತು ಅವಕಾಶಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜಾಗುತ್ತಾರೆ ಎಂದು ಅಭಿಪ್ರಾಯಪಟ್ಟರು

ಅದೇ ರೀತಿ ಮಕ್ಕಳಲ್ಲಿ ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬಲಪಡಿಸಲು ರೋಬೋಟಿಕ್, ಎಐ ಲ್ಯಾಬ್ ಸಹಕಾರಿಯಾಗಲಿದೆ. ಸಣ್ಣ ಮಕ್ಕಳಿಗೆ ಚಟುವಟಿಕೆ ಆಧಾರಿತ ಕಲಿಕೆಗೆ ಉತ್ತೇಜನ ನೀಡುವಲ್ಲಿ ಕ್ರೀಡೊ ಲ್ಯಾಬ್ ಬಹಳ ಪರಿಣಾಮಕಾರಿಯಾಗಿದೆ ಎಂದು ದಿಗಂಬರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಅಭಿಜೀತ್ ಎಂ ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಕೆ ಹೇಮರಾಜ್ ಮತ್ತು ಖಜಾಂಚಿ ಶ್ರೀ ರೋಹಿತ್ ಕುಮಾರ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Related posts

ಬ್ರಹ್ಮಶ್ರೀ ನಾರಾಯಣಗುರುವರ್ಯರ 172ನೇ ಜನ್ಮ ದಿನಾಚರಣೆ ಹಾಗೂ ಲಕ್ಷ ಕುಂಕುಮಾರ್ಚನೆಗೆ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

ದೀಪಾವಳಿ ಹಬ್ಬಕ್ಕೆ ಕಾರ್ಕಳದ ನ್ಯೂ ಪವನ್ ಜ್ಯುವೆಲ್ಲರ್ಸ್ ಆಕರ್ಷಕ ಬಂಪರ್ ಆಫರ್

Madhyama Bimba

ನೆಲ್ಲಿಕಾರುನಲ್ಲಿ ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More