ಕಾರ್ಕಳ

ಕಾರ್ಕಳ: ಹೂತುಹೋದ ಲಾರಿಯನ್ನು ತೆಗೆಯುವ ವಿಚಾರದಲ್ಲಿ ಹಲ್ಲೆ- ಕೇಸು ದಾಖಲು

ಕಾರ್ಕಳ: ಕಲ್ಯಾ ಗ್ರಾಮದ ಕುಂಟಾಡಿ ಎಂಬಲ್ಲಿ ಹೂತುಹೋದ ಲಾರಿಯನ್ನು ತೆಗೆಯುವ ವಿಚಾರವಾಗಿ ಮಾತಿಗೆ ಮಾತು ಬೆಳೆದು ಹಲ್ಲೆ ನಡೆದ ಘಟನೆ ಜು. 02ರಂದು ನಡೆದಿದೆ.

ಕಲ್ಯಾ ಗ್ರಾಮದ ಕುಂಟಾಡಿಯಲ್ಲಿ ಕಲ್ಲುಕೋರೆಗೆ ಹೋಗುವ ಲಾರಿ ಹೂತು ಹೋಗಿದ್ದು ಈ ವಿಚಾರವಾಗಿ ಕಲ್ಯಾ ಗ್ರಾಮದ ಸತೀಶ ಓಬಯ್ಯ ಪೂಜಾರಿ (52) ಹಾಗೂ ಸುರೇಂದ್ರ ರೈರವರಿಗೆ ಲಾರಿಯನ್ನು ತೆಗೆಯುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಸುರೇಂದ್ರ ರೈ ಸತೀಶ ಓಬಯ್ಯ ಪೂಜಾರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಹಲ್ಲೆ ಮಾಡಿದ್ದು, ನಂತರ ಕುಂಟಾಡಿಯಲ್ಲಿ ಪುನಃ ರೀಪಿನಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ.

ಸತೀಶ ಓಬಯ್ಯ ಪೂಜಾರಿ ಗಾಯಗೊಂಡು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಅ. 5-10 ರ ವರೆಗೆ, ಕನ್ನಡ ಜ್ಯೋತಿ ರಥಯಾತ್ರೆ ಜಿಲ್ಲೆಯ ವಿವಿಧೆಡೆ ಸಂಚಾರ

Madhyama Bimba

ಕಾರ್ಕಳ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್‌ನ ನೂತನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ರಾಕೇಶ್ ಅಮೀನ್ ಪ್ರಧಾನ ಕಾರ್ಯದರ್ಶಿಯಾಗಿ ಅನೀಶ್ ತೆಂಡೂಲ್ಕರ್

Madhyama Bimba

ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಜೇಸಿ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಕೆಸರ್ಡ್ ಒಂಜಿ ದಿನ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More