ಕಾರ್ಕಳ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಗಿಡಗಳನ್ನು ನೆಡುವ ಕಾರ್ಯಕ್ರಮ

ಕಾರ್ಕಳ: ನಮ್ಮ ಬದುಕಿಗೆ “ಶುದ್ಧ ಗಾಳಿ, ನೀರು ಮತ್ತು ಬೆಳಕು” ತೀರಾ ಅವಶ್ಯ ಎಂದು ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೊ. ಶ್ರೀಧರ್ ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.

ಕಾರ್ಕಳ ಮಿಯ್ಯಾರು ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಪ್ರಾಯೋಜಕತ್ವದಲ್ಲಿ ಸಂಸ್ಥೆಯ ಆವರಣದಲ್ಲಿ ’ಧನ್ಯವಾದ್’ ಯೋಜನೆಯಡಿಯಲ್ಲಿ 100ಕ್ಕಿಂತಲೂ ಹೆಚ್ಚಿನ ವಿವಿಧ ಪ್ರಭೇದಗಳ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಮಾರ್ಗದರ್ಶಕರು ಹಾಗೂ “ಧನ್ಯವಾದ್ – ವೃಕ್ಷ ಸಂವರ್ಧನಾ ಯೋಜನೆ” ಇದರ ರೋಟರಿ ಜಿಲ್ಲಾ ಅಧ್ಯಕ್ಷರು, ಮಾಜಿ ಜಿಲ್ಲಾ ಗವರ್ನರ್ ರೊ.ಡಾ. ಭರತೇಶ್ ಆದಿರಾಜ್‌ರವರು ಮಾತನಾಡಿ ಅಂತಾರಾಷ್ಟ್ರೀಯ ಸಂಸ್ಥೆ ರೋಟರಿಯ ಧ್ಯೇಯೋದ್ದೇಶ ಗಳಲ್ಲಿ ಒಂದಾದ ಪರಿಸರ ಸಂರಕ್ಷಣೆ ಬಗ್ಗೆ ತಿಳಿಸಿ ಇದಕ್ಕೆ ಪೂರಕವಾಗಿ ಕೈಗೊಂಡ ’ಧನ್ಯವಾದ್ ’- ವೃಕ್ಷ ಸಂವರ್ಧನಾ ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಕುರಿಯವರು ಮಾತನಾಡಿ ರೋಟರಿ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನಂತರ ಸಂಸ್ಥೆಯ ಆವರಣದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರೋಟರಿ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷರಾದ ರೊ ಸುರೇಂದ್ರ ನಾಯಕ್, ಪೂರ್ವ ಅಧ್ಯಕ್ಷರುಗಳಾದ ರೊ.ಸುರೇಶ್ ನಾಯಕ್, ಮತ್ತು ರೊ. ಉಪೇಂದ್ರ ವಾಗ್ಲೆ, ಕ್ಲಬ್‌ನ ಕೋಶಾಧಿಕಾರಿ ರೊ.ಪ್ರಶಾಂತ್ ಜೈನ್, ರೊ.ರಮೇಶ್ ಶೆಟ್ಟಿ, ಆನ್ಸ್ ಅಧ್ಯಕ್ಷೆ ಶರ್ಮಿಳಾ ಶೆಟ್ಟಿ, ಆನೆಟ್ ಸೃಷ್ಟಿ ಆರ್. ಶೆಟ್ಟಿ, ರೊ. ಫೆಲಿಕ್ಸ್ ವಾಜ್, ರೊ. ಅಬ್ದುಲ್ ರಹೆಮಾನ್, ರೊ.ಪ್ರಕಾಶ್ ವಾಗ್ಲೆ, ರೊ. ಸುಜಯ್ ಉಪಸ್ಥಿತರಿದ್ದರು.

ಸಂಸ್ಥೆಯ ಉಪನ್ಯಾಸಕಿ ಹಾಗೂ ನಿಲಯ ಪಾಲಕರಾದ ಡಾ. ತುಲಸೀ ಗಾಯತ್ರಿ ದೇವಿ, ಉಪನ್ಯಾಸಕರಾದ ಗುರುರಾಜ್, ಪ್ರವೀಣ್, ಶ್ರೀಮತಿ ಸುಪ್ರೀತಾ, ಎಲ್ಲಾ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿದ್ದರು.

ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೊ. ಮಂಜುನಾಥ ಹೆಗ್ಡೆ ಸ್ವಾಗತಿಸಿದರು. ರೋಟರಿ ಸಂಸ್ಥೆಯ ಕಾರ್ಯದರ್ಶಿ ವಿಶ್ರಾಂತ ಪ್ರಾಶುಪಾಲರಾದ ರೋ ಗಣೇಶ್ ಬರ್ಲಾಯ ವಂದಿಸಿದರು.

Related posts

ಬಿ.ಐ.ಇ.ಆರ್.ಟಿ (ವಿಶೇಷ ಶಿಕ್ಷಕರ) ಹುದ್ದೆ : ಅರ್ಜಿ ಆಹ್ವಾನ

Madhyama Bimba

ಕಾರ್ಕಳ ಜ್ಞಾನಸುಧಾ: ಹದಿಹರೆಯದ ಬಗ್ಗೆ ಜಾಗೃತಿ ಕಾರ್ಯಕ್ರಮ

Madhyama Bimba

ಕಾರ್ಕಳದ ತೆಳ್ಳಾರು ರಸ್ತೆಯ ಬಳಿ ಪಾದಚಾರಿಗೆ ಬೈಕ್ ಡಿಕ್ಕಿ: ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More