ಶ್ರೀ ಚತುರ್ಮುಖ ಬ್ರಹ್ಮಲಿಂಗೇಶ್ವರ ಸ್ವಾಮಿ ಕ್ಷೇತ್ರ ಅಡ್ಕ
ದಿನಾಂಕ 26/07/26ನೇ ರವಿವಾರ ಶ್ರೀ ಚತುರ್ಮುಖ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ಚತುರ್ಮುಖ ಬ್ರಹ್ಮಲಿಂಗೇಶ್ವರ ಮಹಿಳಾ ಮಂಡಳಿ ಇವರ ಆಶ್ರಯದಲ್ಲಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ಅಡ್ಕ ವರಂಗ ಚತುರ್ಮುಖ ದೇವಸ್ಥಾನ ಬಳಿಯ ಗದ್ದೆಯಲ್ಲಿ ನಡೆಯಿತು.
ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರಿಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಬಲ್ಲಾಡಿ ಮಧುಸೂಧನ್ ಭಟ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳ್ಳಿ ಜೀವನ ಹಾಗೂ ಪೇಟೆ ಜೀವನದ ಕುರಿತು ಬಹಳ ಸಂಕ್ಷಿಪ್ತವಾಗಿ ವಿವರಿಸಿ, ಕೆಸರಗದ್ದೆಗೆ ಇಳಿದು ವಾಲಿಬಾಲ್ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಕರ ಕುಲಾಲ್ ಇವರು ವಹಿಸಿದ್ದರು. ಹಾಗೂ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಸೇವಾಪ್ರತಿನಿಧಿಯಾಗಿರುವ ಶ್ರೀ ಮತಿ ಸಂಧ್ಯಾ,ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ವಲಯ ಅಧ್ಯಕ್ಷರಾಗಿರುವ ಶ್ರೀ ರಮೇಶ್ ಕುಲಾಲ್ ಅಡ್ಕ, ಹಾಗೂ ಊರಿನ ಹಿರಿಯರಾದ ಶ್ರೀ ಬಾಬು ಕುಲಾಲ್ ಮತ್ತು ಶ್ರೀ ಕಿಟ್ಟ ಕುಲಾಲ್ ಹಾಗೂ ಭಜನಾ ಮಂಡಳಿಯ ಅಧ್ಯಕ್ಷರು ಶ್ರೀ ಪ್ರಸನ್ನ ಕುಲಾಲ್ ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷರು ಕು. ಗೀತಾ ಕುಲಾಲ್ ಉಪಸ್ಥಿತರಿದ್ದರು.
ಸುರೇಂದ್ರ ಕುಲಾಲ್ ಅಡ್ಕ ಸ್ವಾಗತಿಸಿದರು,ಪ್ರಸನ್ನ ಕುಲಾಲ್ ವಂದಿಸಿದರು.ಮಹೇಶ್ ಕುಲಾಲ್ ನಿರೂಪಿಸಿದರು.
