ಕಾರ್ಕಳಹೆಬ್ರಿ

ಕಂದಾಯ ನಿರೀಕ್ಷಕರಾಗಿ ಪದೋನ್ನತಿ ಹೊಂದಿದ ರಾಚಪ್ಪಜಿ ಅವರಿಗೆ ಅಭಿನಂದನೆ

ಹೆಬ್ರಿ : ಗ್ರಾಮ ಆಡಳಿತಾಧಿಕಾರಿಯಾಗಿ ರಾಚಪ್ಪಜಿ ಅವರು ನೀಡಿದ ಸೇವೆಯ ಜನರ ಮನದಲ್ಲಿದೆ, ಸರ್ಕಾರದ ಸೇವೆಯಲ್ಲಿ ಅವರು ಜನರ ಪ್ರೀತಿಯನ್ನು ಗಳಿಸಿದ್ದಾರೆ. ಕಚೇರಿಗೆ ಬಂದವರ ಸಮಸ್ಯೆಯನ್ನು ಆಲಿಸಿ ನೀಡಿದ ಸೇವೆ ಸದಾ ಸ್ಮರಣಿಯ, ಕಂದಾಯ ಇಲಾಖೆಯಲ್ಲಿ ಅವರು ಇನ್ನಷ್ಟು ಜನಸೇವೆ ಮಾಡಿ ಉನ್ನತ ಸ್ಥಾನಕ್ಕೇರಿ ಸಾಧನೆ ಮಾಡಲಿ ಎಂದು ಮುಖಂಡರಾದ ಶಿವಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ ಶೆಟ್ಟಿ ಹೇಳಿದರು.

ಕಂದಾಯ ನಿರೀಕ್ಷಕರಾಗಿ ಪದೋನ್ನತಿ ಹೊಂದಿದ ಶಿವಪುರ ಗ್ರಾಮ ಆಡಳಿತಾಧಿಕಾರಿ ರಾಚಪ್ಪಜಿ ಅವರಿಗೆ ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿವಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೂರ್ಸಾಲು ಮೋಹನದಾಸ ನಾಯಕ್ ಮಾತನಾಡಿ ಅತ್ಯುತ್ತಮವಾಗಿ ಸೇವೆ ನೀಡಿದ ರಾಚಪ್ಪಜಿಯವರು ಇನ್ನಷ್ಟು ಸೇವೆಯನ್ನು ನೀಡಲಿ ಎಂದು ಆಶಿಸಿದರು.

ಸೇವಾವಧಿಯಲ್ಲಿ ಸಹಕಾರ ನೀಡಿದ ಸರ್ವರಿಗೂ ರಾಚಪ್ಪಜಿ ಅವರು ಕೃತಜ್ಞತೆ ಸಲ್ಲಿಸಿ ಮುಂದೆ ಕರ್ತವ್ಯದ ಮೂಲಕ ಜನಸೇವೆ ಮಾಡುವುದಾಗಿ ತಿಳಿಸಿದರು.

ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಘವೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಘಟಕರಾದ ಸಮಾಜ ಸೇವಕರಾದ ಬೈಕಾಡಿ ಮಂಜುನಾಥ ರಾವ್ ಶಿವಪುರ, ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಕುಮಾರ್, ವಿದ್ಯುತ್ ಗುತ್ತಿಗೆದಾರ ಉದ್ಯಮಿ ಶ್ರೀನಿವಾಸ ಹೆಬ್ಬಾರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಸುಮಿತ್ರಾ ನಾಯ್ಕ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಅನಸೂಯ, ಗ್ರಾಮ ಸಹಾಯಕ ಮೂರ್ತಿ, ಮುಖ್ಯ ಶಿಕ್ಷಕಿ ಗುಲಾಬಿ ಅಣ್ಣಪ್ಪ ಕುಲಾಲ್, ಪತ್ರಕರ್ತ ಸುಕುಮಾರ್ ಮುನಿಯಾಲ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕರು, ಪ್ರಮುಖರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ ಶೆಟ್ಟಿ ನಿರೂಪಿಸಿ, ಮುಖ್ಯ ಶಿಕ್ಷಕಿ ಗುಲಾಬಿ ಅಣ್ಣಪ್ಪ ಕುಲಾಲ್ ಸ್ವಾಗತಿಸಿದರು.

Related posts

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಡಾ.ಕೀರ್ತಿನಾಥ್ ಬಳ್ಳಾಳ್‌ರಿಗೆ ಬೀಳ್ಕೊಡುಗೆ

Madhyama Bimba

ಶಿವಪುರ ಬಿಲ್ಲವ ಸಂಘದಲ್ಲಿ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ

Madhyama Bimba

ಕ್ರೈಸ್ಟ್‌ಕಿಂಗ್ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More