ಕಾರ್ಕಳ

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಡಾ.ಕೀರ್ತಿನಾಥ್ ಬಳ್ಳಾಳ್‌ರಿಗೆ ಬೀಳ್ಕೊಡುಗೆ

ಕಾರ್ಕಳ: ಭಡ್ತಿಗೊಂಡು ವರ್ಗಾವಣೆಗೊಂಡಿರುವ ಕಾರ್ಕಳ ರೋಟರಿ ಕ್ಲಬ್‌ನ ಸದಸ್ಯರು ಡಾ.ಟಿ ಎಂ. ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇದರ ಅಸೋಸಿಯೇಟ್ ಪ್ರೊಫೆಸರ್, ಡಿಪಾರ್ಟ್ಮೆಂಟ್ ಆಫ್ ಕಮ್ಯುನಿಟಿಯ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದ ಡಾ.ಕೀರ್ತಿನಾಥ್ ಬಳ್ಳಾಲ್ ರವರಿಗೆ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಬೀಳ್ಕೊಡುಗೆ ಸಮಾರಂಭ ಜರುಗಿತು.

ರೋಟರಿ ಕ್ಲಬ್‌ನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿಯವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಕೀರ್ತಿನಾಥ ಬಳ್ಳಾಲ್ ರವರು ರೋಟರಿ ಸಂಸ್ಥೆಯಿಂದ ಅನೇಕ ವಿಷಯಗಳನ್ನು ಕಲಿಯಲು ಸಹಕಾರಿ ಆಯಿತು ಎಂದರು.

ಈ ಸಂದರ್ಭದಲ್ಲಿ ಕ್ಲಬ್ಬಿನ ಹಿರಿಯ ಸದಸ್ಯರಾದ ರೋ. ತುಕಾರಾಮ ನಾಯಕ್, ರೋ. ಡಾ.ಭರತೇಶ್ ಆದಿರಾಜ್, ರೋ. ಜನಾರ್ಧನ್ ಇಡ್ಯಾ, ಒಕೇಶನಲ್ ಸರ್ವಿಸ್ ಚೇರ್‌ಮೆನ್ ಶೈಲೇಂದ್ರ ರಾವ್ ಉಪಸ್ಥಿತರಿದ್ದರು.

ರೋ.ಡಾ. ಭರತೇಶ್ ಆದಿರಾಜ್ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ಶ್ರೀಶ ಭಟ್ ವಂದಿಸಿದರು.

Related posts

ಕಾರ್ಕಳ ರೋಟರಿ ಕ್ಲಬ್‌ಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

Madhyama Bimba

ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

Madhyama Bimba

ಸಾರ್ವಜನಿಕ ಶನಿಪೂಜಾ ಸಮಿತಿ ಕರಿಯಕಲ್ಲು ಮತ್ತು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಸುನಿಲ್ ಕೆ.ಆರ್ ಹುಟ್ಟು ಹಬ್ಬದ ಪ್ರಯುಕ್ತ ಅಶಕ್ತ ಕುಟುಂಬಕ್ಕೆ ಸೂರು- ಭೂಮಿ ಪೂಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More