ಕಾರ್ಕಳಹೆಬ್ರಿ

ಹೆಬ್ರಿ: ಚಿನ್ನ ಅಡವಿಟ್ಟು ಪೂರ್ತಿ ಹಣ ಕೊಡದೆ ವಂಚನೆ

ಹೆಬ್ರಿ: ಯುವತಿಯೋರ್ವರಿಗೆ ಪೈನಾನ್ಸ್‌ನಲ್ಲಿ ಹಣ ಕೊಡಿಸುವುದಾಗಿ ಹೇಳಿ ಚಿನ್ನವನ್ನು ಪಡೆದುಕೊಂಡು ಹಣವನ್ನು ಕೊಡದೆ ಮೋಸ ಮಾಡಿರುವ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ರಿ ಶೃತಿ (32), ಇವರು 2025, ಫೆಬ್ರವರಿ 23ರಂದು ತಾಯಿಯ ಅನಾರೋಗ್ಯದ ಕಾರಣದಿಂದ ತುರ್ತು ಚಿಕಿತ್ಸೆಗಾಗಿ ಹಣದ ಅಗತ್ಯವಿದ್ದುದರಿಂದ ಹೆಬ್ರಿ ಮುತ್ತೂಟ್ ಪೈನಾನ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಪರಿಚಯದ ಮಂಜುನಾಥರವರಲ್ಲಿ ತಿಳಿಸಿದಾಗ ಅವರು ನಿಮ್ಮಲ್ಲಿ ಚಿನ್ನ ಇದ್ದರೆ ಕೊಡಿ ತಾನು ಪೈನಾನ್ಸ್‌ನಲ್ಲಿ ಇಟ್ಟು ಹಣ ಕೊಡುವುದಾಗಿ ತಿಳಿಸಿ, ಶೃತಿ ಅವರಿಂದ 3 ಪವನ್ ತೂಕದ ಕನಕ ಮಾಲೆ ಸರ 1, ತಲಾ 4 ಗ್ರಾಮ ತೂಕದ ಕಿವಿಯೋಲೆ ಒಂದು ಜೊತೆ, 1.5 ಗ್ರಾಂ ತೂಕದ ಲೇಡಿಸ್ ಉಂಗುರ -1, 4 ಪವನ್ ತೂಕದ ಹವಳದ ಸರ -1 ನ್ನು ಕೊಟ್ಟಿದ್ದು, ಮಂಜುನಾಥನು 70,000/- ರೂಪಾಯಿ ಹಣವನ್ನು ಶೃತಿಯವರ ಬ್ಯಾಂಕ್ ಖಾತೆಗೆ ಹಾಕಿದ್ದು ಉಳಿದ ಹಣವನ್ನು ಖಾತೆಗೆ ಹಾಕುವುದಾಗಿ ನಂಬಿಸಿ, ಅಲ್ಲದೆ ಚಿನ್ನವನ್ನು ಬಿಡಿಸಿ ಕೊಡುವುದಾಗಿ 70,000/- ಹಣವನ್ನು ಗೂಗಲ್ ಪೇ ಮುಖಾಂತರ ಹಾಕಿಸಿಕೊಂಡು, ಇದುವರೆಗೂ ಹಣವನ್ನು ಕೊಡದೆ ಅಥವಾ ಚಿನ್ನವನ್ನು ಬಿಡಿಸಿ ಕೊಡದೆ ಮೋಸ ಮಾಡಿರುತ್ತಾರೆ.

Related posts

ಬೆಳ್ಮಣ್ ಸರಕಾರಿ ಮಾದರಿ ಶಾಲೆ ಪ್ರಾರಂಭೋತ್ಸವ – ಎಲ್‌ಕೆಜಿ-ಯುಕೆಜಿ ತರಗತಿಗಳ ಉದ್ಘಾಟನೆ

Madhyama Bimba

ವಸತಿ ಶಾಲೆ ಪ್ರವೇಶಾತಿ : ಅರ್ಜಿ ಆಹ್ವಾನ

Madhyama Bimba

ಚಿಕ್ಕಲ್ ಬೆಟ್ಟು ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ: ನಿವೃತ್ತ ಮುಖ್ಯೋಪಾಧ್ಯಾಯರಾದ ಉದಯ ಶೆಟ್ಟಿ ದಂಪತಿಗೆ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More