ಕಾರ್ಕಳ

ಎಸ್‌ವಿಟಿ: ವಲಯ ಮಟ್ಟದ ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾಟ

ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಮತ್ತು ಎಸ್.ವಿ.ಟಿ. ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ವಲಯ ಮಟ್ಟದ 14 ರ ವಯೋಮಾನದ ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾವಳಿಯು ಎಸ್.ವಿ.ಟಿ. ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಿತು.

ಕಾರ್ಕಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಕ್ರೀಡಾಳುಗಳಿಗೆ ಶುಭ ಹಾರೈಸಿದರು.
ಎಸ್ ವಿ ಟಿ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಕೆ ಪಿ ಶೆಣೈ ಅಧ್ಯಕ್ಷತೆಯನ್ನು ವಹಿಸಿದ್ದರು.

ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣಪ್ಪ, ವಿದ್ಯಾ ಸಂಸ್ಥೆಗಳ ಹಿತೈಷಿ ಅನಂತಕೃಷ್ಣ ಶೆಟ್ಟಿ, ಎಸ್ ವಿ ಟಿ ವನಿತಾ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಪ್ರಭಾ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಂತರ ನಡೆದ ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ಎಸ್. ವಿ.ಟಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಗೊಂಡರು. ಸರ್ಕಾರಿ ಪ್ರೌಢಶಾಲೆ, ಹಿರ್ಗಾನದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಮೂರೂರಿನ ಬಿ.ಎಮ್. ಅನುದಾನಿತ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಗೊಂಡರು. ಎಸ್ ವಿ ಟಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನವನ್ನು ಗಳಿಸಿದರು. ಎಸ್ ವಿ ಟಿ ಆಂಗ್ಲ ಮಾಧ್ಯಮ ಶಾಲೆಯ ಪ್ರಥಮ್ ಪಂದ್ಯಾವಳಿಯ ಅತ್ಯುತ್ತಮ ಸರ್ವಾಂಗೀಣ ಆಟಗಾರನಾಗಿ ಹಾಗೂ ಶೃಂಗಾರ್ ಅತ್ಯುತ್ತಮ ಓಟಗಾರನಾಗಿ ಮತ್ತು ಬಾಲಕಿಯರ ವಿಭಾಗದಲ್ಲಿ ಆಂಡ್ರಿಯಾ ಅತ್ಯುತ್ತಮ ಆಟಗಾರ್ತಿಯಾಗಿ ಮುಂದಿನ ವಿಭಾಗಕ್ಕೆ ಆಯ್ಕೆಗೊಂಡರು.

Related posts

ಹೆಬ್ರಿ: ಮಾದಕ ದ್ರವ್ಯ ವಿರೋಧಿ ದಿನಾಚರಣೆ

Madhyama Bimba

ಪಡುಕುಡೂರು ಶಾಲೆಯ ಮಕ್ಕಳಿಗೆ ಮುಳ್ಳುಗುಡ್ಡೆ ಕೊರಗಜ್ಜ ಕ್ಷೇತ್ರದಿಂದ ಬ್ಯಾಗ್ ಮತ್ತು ಲೇಖನ ಸಾಮಾಗ್ರಿ ಕೊಡುಗೆ

Madhyama Bimba

ಅ.9ರಂದು ಉಡುಪಿಯ ಗೀತಾಂಜಲಿ ಸಿಲ್ಕ್ಸ್‌ನಲ್ಲಿ ನವೀಕೃತ ಪುರುಷರ ವಿಭಾಗದ ಉದ್ಘಾಟನೆ- ಸ್ವದೇಶಿ-ವಿದೇಶಿಯ ಎಲ್ಲ ಪ್ರಮುಖ ಬ್ರಾಂಡ್ ಗಳು ಲಭ್ಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More