ಗಣಿತನಗರ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕಾರ್ಕಳ ಹಾಗೂ ಡಾ.ಎನ್.ಎಸ್.ಎ.ಎಂ. ಪದವಿ ಪೂರ್ವ ಕಾಲೇಜು ನಿಟ್ಟೆ ಇಲ್ಲಿ ಜಂಟಿ ಆಶ್ರಯದಲ್ಲಿ ಜರುಗಿದ, ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿದ್ದು, ತಂಡದ ವಿದ್ಯಾರ್ಥಿ ಪೂಜಿತ್ ಗೌಡ ಬೆಸ್ಟ್ ಗೋಲ್‌ಕೀಪರ್ ಅವಾರ್ಡ್ ತನ್ನದಾಗಿಸಿಕೊಂಡಿದ್ದಾರೆ.

ತಂಡದಲ್ಲಿದ್ದ ಹೃತ್ವಿಕ್, ಆಖಿಲ್, ವಿಖ್ಯಾತ್ ಮತ್ತು ದೃತಿನ್ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.




