ಕಾರ್ಕಳ: ವ್ಯಕ್ತಿಯೋರ್ವರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ. 03ರಂದು ನಡೆದಿದೆ.
ಮುಡಾರು ಗ್ರಾಮದ ಹರೀಶ್ ದೇವಾಡಿಗ (42) ಆತ್ಮಹತ್ಯೆ ಮಾಡಿಕೊಂಡವರು.
ಇವರಿಗೆ ಸುಮಾರು 12 ವರ್ಷಗಳ ಹಿಂದೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಇವರಿಗೆ ವಿಪರೀತ ಮದ್ಯಪಾನದ ಅಭ್ಯಾಸವಿದ್ದು ಪ್ರತಿ ದಿನ ಪತ್ನಿಯ ಜೊತೆ ಜಗಳವಾಡುತ್ತಿದ್ದರು. ಈ ವಿಷಯವಾಗಿ ಪತ್ನಿ 6 ವರ್ಷಗಳ ಹಿಂದೆ ಇವರನ್ನು ಬಿಟ್ಟು ಹೋಗಿದ್ದರು.
ಈ ವಿಚಾರವಾಗಿ ಮತ್ತು ಮದ್ಯಪಾನದ ಅಭ್ಯಾಸದಿಂದ ಜೀವನದಲ್ಲಿ ಜುಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
