ಕಾರ್ಕಳ ಟೈಗರ್ಸ್ ವತಿಯಿಂದ ಅಕ್ಟೋಬರ್ 14 ಹಾಗೂ 15 ರಂದು ಪಿಲಿ ರಂಗ್ ದೈಸಿರ ಕಾರ್ಯಕ್ರಮವು ಕಾರ್ಕಳದ ಬಂಡಿ ಮಠದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಅಕ್ಟೋಬರ್ 10 ಶನಿವಾರ ಸಾಯಂಕಾಲ 4 ಗಂಟೆಗೆ ಅಭೂತ ಪೂರ್ವ ಕಾರುಗಳ ಮೆರವಣಿಗೆ ನಡೆಯಲಿದೆ.
ಈ. ಕಾರ್ ಮೆರವಣಿಗೆಯಲ್ಲಿ ಸುಮಾರು 200 ಕಾರುಗಳು ಭಾಗವಹಿಸಲಿವೆ.
ಈ ಮೆರವಣಿಗೆಯು ಕಾರ್ಕಳ ಬಂಡಿಮಠದಿಂದ ಆರಂಭಗೊಂಡು ಬೈ ಪಾಸ್ ರಸ್ತೆಯಲ್ಲಿ ಬೈ ಪಾಸ್ ವೃತ್ತವರೆಗೆ ಸಾಗಿ ಅಲ್ಲಿಂದ ಜೋಡು ರಸ್ತೆವರೆಗೆ ಹೋಗಿ ನಂತರ ಪುನಃ ಬಂಡಿ ಮಠದಲ್ಲಿ ಜಮಾವಣೆ ಆಗಲಿದೆ
ಈ ಮೆರವಣಿಗೆಯಲ್ಲಿ ತಮ್ಮ ತಮ್ಮ ಕಾರುಗಳನ್ನು ತಗೊಂಡು ಬಂದು ಈ ಮೆರವಣಿಗೆಯ ಅಂದವನ್ನು ಹೆಚ್ಚಿಸುವಂತೆ ಕಾರ್ಕಳ ಟೈಗರ್ಸ್ ಪ್ರಕಟಣೆ ತಿಳಿಸಿದೆ
