ಕಾರ್ಕಳ

ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ  17ಸಿ ವತಿಯಿಂದ ಒಂದು ಜಿಲ್ಲೆ ಒಂದು ಸೇವಾ ಯೋಜನೆ

ಬೈಲೂರು:ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317 ಸಿ ಇದರ ವತಿಯಿಂದ ಒಂದು ಜಿಲ್ಲೆ ಒಂದು ಸೇವಾ ಯೋಜನೆ ಎಂಬ ವಿಶೇಷ ಸೇವಾ ಕಾರ್ಯಕ್ರಮವು ಬೈಲೂರು ಕಣಂಜಾರುವಿನಲ್ಲಿರುವ ಹೊಸ ಬೆಳಕು ಸೇವಾಶ್ರಮದಲ್ಲಿ ಅ.೮ರಂದು ನಡೆಯಿತು.

ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್ ಲಯನ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜಮುಖಿ ಸೇವೆಯಲ್ಲಿ ಲಯನ್ಸ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈಗಾಗಲೇ ಹಲವಾರು ಸಮಾಜಮುಖಿ ಸೇವೆಗಳು ಕ್ಲಬ್ಬಿನಿಂದ ನಡೆದಿದೆ. ಒಂದು ಜಿಲ್ಲೆ ಒಂದು ಸೇವಾ ಯೋಜನೆ ಕಾರ್ಯಕ್ರಮವು ಸೇವಾಶ್ರಮದ ನಿವಾಸಿಗಳ ಜೊತೆ ನಡೆದಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಹಾಗೂ ಕಾರ್ಯಕ್ರಮಕ್ಕೆ ಒಂದು ಘನತೆ ದೊರೆತಿದೆ ಎಂದರು. ಜಿಲ್ಲೆ 317 ಸಿ ಸುಮಾರು ೪೫ ಕ್ಲಬ್ಬಿನ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮಿಂದಾದ ಸೇವಾ ರೂಪದ ವಿವಿಧ ದಿನಸಿ ಸಾಮಗ್ರಿಗಳು, ವಸ್ತ್ರಗಳು ಹಾಗೂ ಆಶ್ರಮಕ್ಕೆ ಅಗತ್ಯವಿರುವ ಸಾಮಾಗ್ರಿಗಳನು ನೀಡಿರುವುದು ಶ್ಲಾಘನೀಯವೆಂದರು.

ಸಭೆಯ ಅಧ್ಯಕ್ಷತೆಯನ್ನು ಒಂದು ಜಿಲ್ಲೆ ಒಂದು ಸೇವಾ ಯೋಜನೆಯ ಜಿಲ್ಲಾ ಸಂಯೋಜಕರಾದ ಏಕನಾಥ ಬೋಲಾರ್ ವಹಿಸಿದ್ದರು.

ಹೊಸ ಬೆಳಕು ಸೇವಾಶ್ರಮದ ಟ್ರಸ್ಟ್‌ನ ಟ್ರಸ್ಟಿ ತನುಲ ತರುಣ್ ಮಾತನಾಡಿ ಆಶ್ರಮಕ್ಕೆ ಲಯನ್ಸ್ ವತಿಯಿಂದ ವಿವಿಧ ಸಾಮಾಗ್ರಿಗಳನ್ನು ನೀಡಿರುದಕ್ಕೆ ಕ್ರತಜ್ಞತೆ ಸಲ್ಲಿಸಿದರು. ಒಂದು ಆಶ್ರಮ ನಡೆಸುವುದು ಅಷ್ಟು ಸುಲಭದ ಮಾತಲ್ಲ ಆದರೆ ಎಲ್ಲರ ಸಹಕಾರದಿಂದ ಆಶ್ರಮವು ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಇಲ್ಲಿ ಸುಮಾರು 250 ಮಂದಿ ಇದ್ದು ತೀವೃ ತರಹದ ಅನಾರೋಗ್ಯದಿಂದ ಬಳಲುತ್ತಿರುವವರು ಇದ್ದಾರೆ ಆದರೆ ಇಲ್ಲಿ ಅವರಿಗೆ ಯಾವುದೆ ರೀತಿಯ ತೊಂದರೆಯಾಗದಂತೆ ಸೇವೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬೈಲೂರು ಆರೂಸ್ಸ್ ನರ್ಸಿಂಗ್ ಹೋಮ್‌ನ ವೈದ್ಯರಾದ ಡಾ| ಶಶಿಕಿರಣ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿಕೊಟ್ಟರು. ಕಾರ್ಕಳ ಗಾಜ್ರಿಯಾ ಆಸ್ಪತ್ರೆಯ ವೈದ್ಯೆ ಡಾ| ನಿವೇದಿತಾ ಉಚಿತ ಕಣ್ಣಿನ ತಪಾಸಣೆ ನಡೆಸಿದರು.
ವಿವಿಧ ಕ್ಲಬ್ಬಗಳಿಂದ ಆಶ್ರಮಕ್ಕೆ ಅಂದಾಜು 1.5ಲಕ್ಷ ಮೌಲ್ಯದ ದಿನಸಿ ಸಾಮಾನುಗಳು, ಬಟ್ಟೆಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ನೀಡಿ ಸಹಕರಿಸಿದರು.

ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ರಮಾನಂದ ಕೆ., ಮಾಜಿ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳ್ಳಿ, ಎನ್.ಎಂ. ಹೆಗ್ಡೆ, ಬಿ ಅರುಣ್ ಕುಮಾರ್ ಹೆಗ್ಡೆ, ರಜತ ಕುಮಾರ್ ಹೆಗ್ಡೆ, ದಿನಕರ ಶೆಟ್ಟಿ, ರಿಷಿಕೇಶ್ ಹೆಗ್ಡೆ, ರಮಾ ಬೋಳಾರ್ ಒಂದು ಜಿಲ್ಲೆ ಒಂದು ಸೇವಾ ಯೋಜನೆಯ ಸಂಯೋಜಕರಾದ ಶಂಕರ್ ಶೆಟ್ಟಿ ತೆಕ್ಕಟ್ಟೆ, ಪ್ರಭಾಕರ್ ಕುಂದರ್ ಜಿಲ್ಲಾ ಕಾರ್ಯದರ್ಶಿ ಸದಾನಂದ ನಾವುಡ, ಜಿಲ್ಲಾ ಕೋಶಾಧಿಕಾರಿ ವಿನೋದ್ ನಾರಾಯಣ್, ಜಿಎಸ್‌ಟಿ ಸಂಯೋಜಕರಾದ ಶಾಲಿನಿ ಬಂಗೇರ ಉಪಸ್ಥಿತರಿದ್ದರು. ನೀರೆ ಬೈಲೂರು ಲಯನ್ಸ್ ಕ್ಲಬ್‌ನ ವಲಯಾಧ್ಯಕ್ಷ ಪ್ರಶಾಂತ ಕುಮಾರ್ ಶೆಟ್ಟಿ, ಉದಯ ಕುಮಾರ್ ಹೆಗ್ಡೆ, ಸುರೇಶ್ ಶೆಟ್ಟಿ ಸಾಯಿರಾಮ ಸಹಕರಿಸಿದರು.

ಕಾರ್ಯಕ್ರಮವನ್ನು ದಿನಾಕರ ಶೆಟ್ಟಿ ನಿರೂಪಿಸಿದರು.

Related posts

ಜೆಇಇ ಅಡ್ವಾನ್ಸ್ ಪರೀಕ್ಷಾ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜಿನ ನಾಗದೇವ್ ಎಂ.ಜಿ. ರಾಷ್ಟ್ರಕ್ಕೆ 196  ರ್‍ಯಾಂಕ್- ಕ್ರಿಯೇಟಿವ್ ಸಂಸ್ಥೆಯ 19  ವಿದ್ಯಾರ್ಥಿಗಳು ತೇರ್ಗಡೆ

Madhyama Bimba

ಶತಾಯುಷಿ ಖತೀಜಮ್ಮ ನಿಧನ

Madhyama Bimba

ರಾಜ್ಯ ಅಥ್ಲೆಟಿಕ್ಸ್ ಕೂಟದಲ್ಲಿ ನಿಟ್ಟೆ ಕ್ರೀಡಾಪಟುಗಳ ಸಾಧನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More