ಕಾರ್ಕಳ

ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ಚಂಡಿಕಾ ಯಾಗ ಹಾಗೂ ಶರಧಿ ಗ್ರಂಥ ಲೋಕಾರ್ಪಣೆ

ಕಾರ್ಕಳ: ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅ. 17ರಂದು ನಕ್ರೆ ಬಲಿಪಗುತ್ತು ಶ್ರೀಮತಿ ಮತ್ತು ಶ್ಯಾಮ್ ಎನ್. ಶೆಟ್ಟಿ ಹಾಗೂ ಕುಟುಂಬಸ್ಥರ 25ನೇ ವರ್ಷದ ಚಂಡಿಕಾ ಯಾಗ ಹಾಗೂ ಶರಧಿ ಗ್ರಂಥ ಲೋಕಾರ್ಪಣೆ ಮತ್ತು ಶ್ಯಾಮ್ ಎನ್. ಶೆಟ್ಟಿ ಅಭಿಮಾನಿ ಬಳಗ, ಮುಂಬಯಿ ಟೀಮ್ ಐಲೇಸಾ ಇವರ ಸಹಯೋಗದಲ್ಲಿ ನಕ್ರೆ ಬಲಿಪಗುತ್ತು ಶ್ಯಾಮ್ ಎನ್. ಶೆಟ್ಟಿಯವರ 75ರ ಸಂಭ್ರಮ ಶರಧಿ ಗ್ರಂಥ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭವು ಅಪರಾಹ್ನ 3.00 ಗಂಟೆಗೆ ನಡೆಯಲಿದೆ.

ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಗ್ರಂಥವನ್ನು ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡಲಿದ್ದಾರೆ. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.

ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಮತ್ತು ಉಪನ್ಯಾಸಕಿ ಶ್ರೀಮತಿ ವನಿತಾ ಶೆಟ್ಟಿ ಗ್ರಂಥ ಪರಿಚಯ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಿವೃತ್ತ ಯೋಧ ಪ್ರವೀಣ್ ಶೆಟ್ಟಿ, ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ ಜಯಕರ ಮಡಿವಾಳ, ನಾಟಿ ವೈದ್ಯರಾದ ವಿಜಯ್ ಶೆಟ್ಟಿ ನಕ್ರೆ ಪಾದೆಮನೆ, ಅಟೋ ಚಾಲಕರಾದ ಸುಂದರ ಶೆಟ್ಟಿಗಾರ್ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಟೀಮ್ ಐಲೇಸಾ ಮುಂಬೈ ಮತ್ತು ಬೆಂಗಳೂರಿನ ಪ್ರಸಿದ್ಧ ಕಲಾವಿದರಿಂದ ಸಂಗೀತ ಹಾಗೂ ನೃತ್ಯ ವೈಭವ ಕಾರ್ಯಕ್ರಮ ನಂತರ ಜೋಡುರಸ್ತೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸದಸ್ಯರಿಂದ ವಿಲಾಸ್ ಕುಮಾರ್ ನಿಟ್ಟೆ ವಿರಚಿತ ಪ್ರಸಾದ್ ಐಸಿರ ಕುಕ್ಕುಂದೂರು ಇವರ ನಿರ್ದೇಶನದಲ್ಲಿ ತುಳು ಸಾಂಸಾರಿಕ ‘ಗಗ್ಗರ’ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Related posts

ಕುಂದಾಪುರ ಪತ್ರಕರ್ತನ ಮೇಲೆ ಹಲ್ಲೆ- ಕೇಸು ದಾಖಲು

Madhyama Bimba

ಯುವವಾಹಿನಿ ಕಾರ್ಕಳ ಘಟಕದ ವತಿಯಿಂದ ಛತ್ರಿ ಹಾಗೂ ರೇನ್‌ಕೋಟ್ ವಿತರಣೆ

Madhyama Bimba

ಬಿ.ಐ.ಇ.ಆರ್.ಟಿ (ವಿಶೇಷ ಶಿಕ್ಷಕರ) ಹುದ್ದೆ : ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More